ನೀವು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ನಾ ಪ್ರೈವೆಟ್ ಇಟ್ಟಿದೀರಾ? ಪ್ರೈವೆಟ್ ಇಟ್ಟಿದ್ರೆ ಈಗ್ಲೇ ಪಬ್ಲಿಕ್ ಮಾಡ್ಕೊಳಿ ಯಾಕಂದ್ರೆ ಇನ್ಮುಂದೆ ಇದು ನಿಮ್ಮ ಶಿಕ್ಷಣಕ್ಕೆ, ಉದ್ಯೋಗಕ್ಕೆ ಕಡ್ಡಾಯ. ಸೋಶಿಯಲ್ ಮೀಡಿಯಾ ಇದ್ರೆ ಮಾತ್ರ ವೀಸಾ ಸಿಗತ್ತೆ. ಯಸ್ ಅಮೆರಿಕಕ್ಕೆ ಉದ್ಯೋಗ, ಶಿಕ್ಷಣ ಅಥವಾ ಕುಟುಂಬ ವೀಸಾದ ಮೂಲಕ ಬರುವವರಿಗೆ ಈಗ ಹೊಸ ಭದ್ರತಾ ನಿಯಮ ಜಾರಿಗೆ ಬಂದಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಕಾಲದಿಂದಲೇ ಆರಂಭವಾದ ಈ ಕಠಿಣ ನೀತಿಗೆ ಇದೀಗ ಮತ್ತಷ್ಟು ಬಲ ನೀಡಲಾಗಿದೆ. ಉದ್ಯೋಗಕ್ಕಾಗಿ ಅಮೆರಿಕ ಪ್ರವೇಶಿಸಲು ಬಳಸುವ H-1B ಹಾಗೂ ಅವರೊಂದಿಗೆ ಬರುವವರಿಗೆ ನೀಡಲಾಗುವ H-4 ವೀಸಾಗಳಿಗೆ ಸಂಬಂಧಿಸಿದಂತೆ ಅಮೆರಿಕ ಹೊಸ ಕಟ್ಟುನಿಟ್ಟಿನ ನಿಯಮ ಘೋಷಿಸಿದೆ.
ಇದಕ್ಕಾಗಿ ಸಾಮಾಜಿಕ ಜಾಲತಾಣಗಳೇ ಮುಖ್ಯ ಆಧಾರವಾಗಿವೆ. ಇಲ್ಲಿಯವರೆಗೆ ಕೇವಲ ವಿದ್ಯಾರ್ಥಿ ವೀಸಾ, ಅಲ್ಪಾವಧಿ ಪ್ರವಾಸ ವೀಸಾಗಳಿಗೆ ಮಾತ್ರ ಸಾಮಾಜಿಕ ಜಾಲತಾಣ ಖಾತೆಗಳನ್ನು ಪಬ್ಲಿಕ್ ಮಾಡುವುದು ಕಡ್ಡಾಯವಾಗಿತ್ತು. ಈಗ ಅದೇ ನಿಯಮವನ್ನು H-1B ಮತ್ತು H-4 ವೀಸಾಗಳಿಗೂ ವಿಸ್ತರಿಸಲಾಗಿದೆ.
ಅಮೆರಿಕದ ಗೃಹ ಸಚಿವಾಲಯ ಹೇಳುವಂತೆ, ಅರ್ಜಿದಾರರು ಅಮೆರಿಕದ ರಾಷ್ಟ್ರೀಯ ಹಿತ, ಭದ್ರತೆ, ಜನರ ಸುರಕ್ಷತಿಗೆ ಅಪಾಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು, ಕಾಮೆಂಟ್‌ಗಳು, ಫಾಲೋವರ್ಸ್ ಚಟುವಟಿಕೆ–ಎಲ್ಲವನ್ನೂ ಪರಿಶೀಲಿಸಲಾಗುತ್ತದೆ. ವೀಸಾ ಎಂಬುದು ಹಕ್ಕಲ್ಲ; ಅದು ಅಮೆರಿಕ ನೀಡುವ ಸವಲತ್ತು ಎಂದಿದ್ದಾರೆ. ಹಾಗಾದ್ರೆ ಟ್ರಂಪ್ ನ ಈ ನಿರ್ಧಾರ ಬಗ್ಗೆ ನೀವೇನಂತೀರಿ ಕಾಮೆಂಟ್ ಮಾಡಿ.
ವರದಿ : ಲಾವಣ್ಯ ಅನಿಗೋಳ




