ಹರೇ ಕೃಷ್ಣ ಜಪದ ಪವಾಡ: ನೇಪಾಳ ಸುರಂಗದಲ್ಲಿ 10 ದಿನದಿಂದ ಸಿಲುಕಿದ್ದ ಇಬ್ಬರ ರಕ್ಷಣೆ.

Katmandu: ನೇಪಾಳದ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಕೆಲ ದಿನಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹ ಎದುರಾಗಿ, ಹಲವರನ್ನು ಬಲಿ ಪಡೆದಿದ್ದು, ಇನ್ನೂ ನಾಪತ್ತೆಯಾಗಿರುವವರನ್ನು ಹುಡುಕುವ ಕಾರ್ಯ ಮುಂದುವರೆದಿದೆ.

ಹಲವರು ತಮ್ಮವರಿಗಾಗಿ ಆಸ್ಪತ್ರೆ ಬಳಿ ಕಾದು ಕಾದು ಸೋತಿದ್ದಾರೆ. ಏಕೆಂದರೆ ಪ್ರವಾಹವಾಗಿ ಇಷ್ಟು ದಿನವಾದ ಬಳಿಕ ತಮ್ಮವರು ಬದುಕಿ ಬರುವ ನಂಬಿಕೆ ಸತ್ತೇ ಹೋಗಿರುತ್ತದೆ. ಆದರೆ ಇಲ್ಲಿ ಇಬ್ಬರು ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಿ, ಬಳಿಕ ಖುದ್ದು ತಾವೇ ಸುರಂಗದಲ್ಲಿ ಸಿಲುಕಿದ್ದರು. ಆದರೆ 10 ದಿನ ಕಳೆದ ಬಳಿಕವೂ ಪವಾಡ ಸದೃಶ ಎಂಬಂತೆ ಬದುಕಿ ಬಂದಿದ್ದಾರೆ.

ನೇಪಾಳದ ತ್ರಿಶೂಲಿಯ ಜಲ ವಿದ್ಯುತ್ ಯೋಜನೆಯ  ಸುರಂಗದಲ್ಲಿ 170 ಮೀ. ಆಳದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ. ಕಬೀರ್ ಮಹಾರ್ಜನ್(45) ಮತ್ತು ಸಂಜಯ್ ಸಾಹ್ (30) ಎಂಬ ಇಬ್ಬರೂ 10 ದಿನದಿಂದ ಈ ಸುರಂಗದಲ್ಲಿ ಸಿಲುಕಿದ್ದರು. ಸದ್‌ಯ ಇವರಿಬ್ಬರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಮಹಾರ್ಜನ್ ಪರಿಸ್ಥಿತಿ ಗಂಭೀರವಾಗಿದೆ.

ಇಬ್ಬರಲ್ಲಿ ಓರ್ವ ವ್ಯಕ್ತಿ ಮಾಧ್ಯಮದ ಜತೆ ಮಾತನಾಡಿದ್ದು, ನಾವು ಇತರರನ್ನು ರಕ್ಷಿಸಲು ಹೋಗಿ, ಅಲ್ಲಿ ಸಿಲುಕಿದ್ದೆವು. ಆದರೆ ನಮ್ಮನ್ನು ಶ್ರೀಕೃಷ್ಣ ರಕ್ಷಿಸುತ್ತಾನೆಂಬ ನಂಬಿಕೆ ಇತ್ತು. ಹೀಗಾಗಿ ಪ್ರತಿ ಕ್ಷಣ ಹರೇ ಕೃಷ್ಣ ಎಂಬ ಜಪ ಮಾಡುತ್ತಿದ್ದೆ. ಇದೀಗ ಕೃಷ್ಣ ನಮ್ಮ ರಕ್ಷಣೆ ಮಾಡಿದ್ದಾನೆಂದು ಹೇಳಿದ್ದಾನೆ. ವಿಶೇಷ ಅಂದ್ರೆ ನಿನ್ನೆ ಶ್ರೀಕೃಷ್ಣ ಜನ್ಮಾಷ್ಟಮಿ ಇದ್ದು, ಇವರನ್ನು ನಿನ್ನೆಯೇ ರಕ್ಷಿಸಿ, ಆಚೆ ತರಲಾಗಿತ್ತು.

ಇನ್ನು ನೇಪಾಳದ ಮಹಾದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 1295 ಜನರು ಪ್ರಾಣ ಕಳೆದುಕ“ಂಡಿದ್ದಾರೆ. 4,798 ಜನರು ಈಗಾಗಲೇ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.

About The Author