ಪೂಜೆಯ ವೇಳೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಕೆಲ ಕೆಲಸಗಳು ಮಾಡುವುದು ನಿಷಿದ್ಧವಿದೆ. ಯಾವುದು ಆ ನಿಯಮ, ಎಂಥ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಪೂಜೆ ವೇಳೆ ಮಾತನಾಡಬಾರದು, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನ ಮಾಡಬಾರದು. ಜಗಳ ಮಾಡಿ ಪೂಜೆಗೆ ಕೂರುವುದೋ, ಅಥವಾ ಪೂಜೆಗೆ ಕುಳಿತಾಗ ಜಗಳವಾಡುವುದು, ಸಿಟ್ಟು ಮಾಡುವುದೆಲ್ಲ ಮಾಡಬಾರದು. ಕೆಲವೊಮ್ಮೆ ಹೊಸದಾಗಿ ಪ್ರೀತಿಯಲ್ಲಿ ಬಿದ್ದವರು 24 ಗಂಟೆಯೂ ಅದರ ಗುಂಗಿನಲ್ಲೇ ಇರ್ತಾರೆ. ಆದ್ರೆ ಪೂಜೆ ಮಾಡುವಾಗ ಭಕ್ತಿ ಬಿಟ್ಟು ಬೇರೆನನ್ನೂ ನೆನೆಯದೇ ಪೂಜಿಸಿದರೆ ಮಾತ್ರ ದೇವರು ಒಲಿಯುತ್ತಾನೆ.
ಇನ್ನು ಪೂಜೆ ಮಾಡುವ ಸಂದರ್ಭದಲ್ಲಿ ಮಕ್ಕಳನ್ನು ಅಳಲು ಬಿಡಬಾರದು. ಕೋಪಗೊಂಡ ಮನಸ್ಸಿನಿಂದ, ಒಲ್ಲದ ಮನಸ್ಸಿನಿಂದ ಪೂಜೆ ಮಾಡಕೂಡದು. ಹಾಗೆ ಪೂಜೆ ಮಾಡಿದರೆ ಪೂಜಾ ಫಲ ದೊರೆಯುವುದಿಲ್ಲ. ಇಷ್ಟೇ ಅಲ್ಲದೇ ಮನೆಯ ಬಾಗಿಲು ಮುಚ್ಚಿ ಪೂಜೆ ಮಾಡಬಾರದು. ಗಂಡು ಮಕ್ಕಳು ಪೂಜೆ ಮಾಡುವ ಸಂದರ್ಭದಲ್ಲಿ ತಲೆ ಸ್ನಾನ ಮಾಡಬೇಕು. ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಿದಾಗ ತಲೆ ಕೂದಲನ್ನು ಕಟ್ಟಿಕೊಂಡು, ಹಣೆಗೆ ಕುಂಕುಮ, ಕೈಗೆ ಬಳೆ ಹಾಕಿಕೊಂಡು ಪೂಜೆಗೆ ಕೂರಬೇಕು.
ಇನ್ನು ಮಧ್ಯಾಹ್ನದ ವೇಳೆ ಪೂಜೆ ಮಾಡಕೂಡದು. ಅದರಲ್ಲೂ ಅನ್ನ ಪದಾರ್ಥ ತಿಂದು ಪೂಜೆ ಮಾಡುವುದು ನಿಷಿದ್ಧವಾಗಿದೆ. ಪೂಜೆಯ ವೇಳೆ ದೇವರಿಗಿಡವ ನೈವೇದ್ಯ ಮತ್ತು ಹೂವಿನ ಪರಿಮಳ ತೆಗೆದುಕೊಳ್ಳಬಾರದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




