Bigg Boss Kannada Season 12: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ರಕ್ಷಿತಾ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ರಕ್ಷಿತಾ ಓವರ್ ಸ್ಮಾರ್ಟ್ ಇದ್ದಾಳೆ. ಓವರ್ ಆ್ಯಕ್ಟ್ ಮಾಡ್ತಾಳೆ. ರಕ್ಷಿತಾದು ಎಲ್ಲವೂ ಓವರ್. ಆದರೆ ಗೆಲ್ಲಲು ಏನೇನು ಬೇಕೋ ಎಲ್ಲವೂ ಮಾಡುತ್ತಿದ್ದಾಳೆ. ಆಚೆ ಜನರಿಗೆ ಆಕೆ ಇಷ್ಟವಾಗುತ್ತಿರಬಹುದು. ಆದರೆ ನನಗೆ ಅವಳು ಓವರ್ ಅಂತ ಅನ್ನಿಸುತ್ತೆ ಎಂದಿದ್ದಾರೆ ಜಾನ್ವಿ.
ಇನ್ನು ರಕ್ಷಿತಾ ಮುಂಚೆ ಉತ್ತಮರು ಅಂತಾ ಟ್ರೋಲ್ ಆಗ್ತಿದ್ದರು. ಆದರೆ ಈಗ ನೆಗೆಟಿವ್ ಆಗಿ ಜನ ಅವರನ್ನು ನೋಡೋಕ್ಕೆ ಶುರು ಮಾಡಿದ್ದಾರೆ ಎಂದಾಗ ಉತ್ತರಿಸಿದ ಜಾನ್ವಿ. ಜನ ಇನೋಸೆಂಟ್ ಇದ್ದಾರೆ. ನಾನು ಆಕೆಯ ಈ ಮುಖವನ್ನು ಮುಂಚೆಯೇ ನೋಡಿದ್ದೆ ಹಾಗಾಗಿ ನನಗೇನೂ ಅನ್ನಿಸುತ್ತಿಲ್ಲ. ಆದರೆ ಜನ ಸ್ಕ್ರೀನ್‌ನಲ್ಲಿ ತೋರಿಸುವುದನ್ನೇ ನಂಬಿ ಆಕೆಗೆ ಉತ್ತಮಳು, ಕೆಟ್ಟವಳು ಅಂತಾ ಹೇಳುತ್ತಾರೆ. ರಿಯಾಲಿಟಿಯನ್ನು ಯಾರೂ ಚೆಕ್ ಮಾಡುತ್ತಿಲ್ಲ ಎಂದಿದ್ದಾರೆ.
ಏಕೆಂದರೆ ಬಿಗ್‌ಬಾಸ್ ಮನೆಯಲ್ಲಿ ಕೆಲವರು ಮುಖವಾಡ ಹಾಕಿರುತ್ತಾರೆ. ಕೆಲವರು ತಮ್ಮ ಮಾತಿನಿಂದ ಜನರನ್ನು ಮೆಚ್ಚಿಸಬೇಕು ಅಂತಾ ಆಡುತ್ತಾರೆ. ಹೀಗೆ ಕೆಲವರು ಕೆಲವು ತಂತ್ರಗಳನ್ನು ಮಾಡುತ್ತಾರೆ. ಆದರೆ ಜನಕ್ಕೆ ಅದೆಲ್ಲ ಅರ್ಥವಾಗೋದಿಲ್ಲ. ಅವರು ಸ್ಕ್ರೀನ್ ಮೇಲೆ ನೋಡಿಯೇ ಜಡ್ಜ್ ಮಾಡುತ್ತಾರೆ ಎಂದಿದ್ದಾರೆ ಜಾನ್ವಿ.

