Bengaluru News: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಯಶಸ್ವಿ ‘ಮೆಗಾ ಫ್ಲಾಟ್ ಮೇಳ’

Bengaluru: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಉತ್ತಮ ಗುಣಮಟ್ಟದ ಪ್ರೀಮಿಯಂ ಫ್ಲಾಟ್ ಹಾಗೂ ವಿಲ್ಲಾಗಳನ್ನು ಮಾರಾಟ ಮಾಡಲು ಹಮ್ಮಿಕೊಂಡಿದ್ದ ಬೃಹತ್ ಫ್ಲಾಟ್ ಮೇಳದ ಮೊದಲನೆಯ ದಿನವಾದ ಇಂದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅತ್ಯಂತ ಸರಳವಾಗಿ, ಪಾರದರ್ಶಕವಾಗಿ ಹಮ್ಮಿಕೊಂಡಿದ್ದ ಆಯ್ಕೆ ಯೋಜನೆಗೆ ಮೇಳದಲ್ಲಿ ಭಾಗವಹಿಸಿದ ಎಲ್ಲ ಗ್ರಾಹ್ಯಕರೂ ತೃಪ್ತಿ ವ್ಯಕ್ತಪಡಿಸಿದರು. ಫ್ಲಾಟ್ ಆಯ್ಕೆ ಮಾಡಿದ ನಂತರ 50 ಸಾವಿರ ರೂಪಾಯಿ ಪಾವತಿ ಮಾಡಿದರೆ ಸಾಕು. ತಕ್ಷಣ ಕ್ಯೂಆರ್ ಕೋಡ್ ಮೂಲಕ ನೋಂದಣಿ ಹಣ ಪಾವತಿಸಲು ಮಾಡಿರುವ ವ್ಯವಸ್ಥೆ ಜನಪ್ರಿಯವಾಗಿದೆ. ಸ್ಥಳದಲ್ಲೇ ಬಿಡಿಎ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಹಾಜರಿದ್ದು ತಕ್ಷಣದಲ್ಲಿ ಫ್ಲಾಟ್ ವಿತರಣಾ ಪತ್ರ ನೀಡಿದ್ದು ಎಲ್ಲರಿಗೂ ಸಂತಸ ತಂದಿತು.

ಕಣಿಮಿಣಿಕೆ, ಕೊಮ್ಮಘಟ್ಟ ಹಾಗೂ ಹುಣ್ಣಿಗೆರೆಯಲ್ಲಿ ಫ್ಲಾಟ್ ಗಳನ್ನು ನೋಡಲು ವ್ಯವಸ್ಥೆ ಮಾಡಲಾಗಿತ್ತು. ಮೂರೂ ಪ್ರದೇಶಗಳಿಗೆ ಭೇಟಿ ನೀಡಲು ವಾಹನ ವ್ಯವಸ್ಥೆ ಮಾಡಿದ್ದು ಆಯ್ಕೆಗೆ ಅನುಕೂಲವಾಯಿತು ಎಂದು ಗ್ರಾಹಕರು ತಿಳಿಸಿದರು.

ಎಲ್ಲಾ ಪ್ರದೇಶದಲ್ಲೂ ಮಾದರಿ ಫ್ಲಾಟ್ ಗಳನ್ನು ಸಜ್ಜುಗೊಳಿಸಿದ ಕಾರಣ ಕೊಂಡುಕೊಳ್ಳುವವರಿಗೆ ತಮ್ಮ ನಿರ್ಧಾರ ಮಾಡಲು ನೆರವಾಯಿತು.

ನಾಳೆ ಡಿಸೆಂಬರ್ 7 (ಭಾನುವಾರ) ರಂದೂ ಸಹಾ ಕಣಿಮಿಣಿಕೆ, ಕೊಮ್ಮಘಟ್ಟ ಹಾಗೂ ಹುಣ್ಣಿಗೆರೆಯಲ್ಲಿ ಈ ಫ್ಲಾಟ್ ಹಾಗೂ ವಿಲ್ಲಾ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ.

ದಶಕಗಳಿಂದ, ಬಿಎಡಿಎ ಯೋಜಿತ ಲೇಔಟ್‌ಗಳು ಮತ್ತು ಗುಣಮಟ್ಟದ ಮನೆಗಳನ್ನು ನಿರ್ಮಿಸಿ, ಲಕ್ಷಾಂತರ ಬೆಂಗಳೂರು ಕುಟುಂಬಗಳ ನಂಬಿಕೆಯನ್ನು ಗಳಿಸಿದೆ. ಬಿಡಿಎ ಗೃಹ ಯೋಜನೆಗಳು ಪಾರದರ್ಶಕತೆ, ದೃಢ ನಿರ್ಮಾಣ, ಮತ್ತು ದೀರ್ಘಕಾಲೀನ ಮೌಲ್ಯಕ್ಕೆ ಆದ್ಯತೆ ನೀಡುತ್ತವೆ.

ಬಿಎಡಿಎ ಮನೆಗಳು ಸ್ಪಷ್ಟ ದಾಖಲೆ, ಪಾರದರ್ಶಕ ಪ್ರಕ್ರಿಯೆ, ನ್ಯಾಯಸಮ್ಮತ ಬೆಲೆ ಮತ್ತು ವಿಶ್ವಾಸಾರ್ಹ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಇದು ಗ್ರಾಹಕರ ಕುಟುಂಬದ ಭವಿಷ್ಯಕ್ಕೆ ಸುರಕ್ಷಿತ ಹೂಡಿಕೆ.

ಕಣಿಮಿಣಿಕೆ ಯೋಜನೆಯಲ್ಲಿ ವಿಶಾಲ ಮೂರು ಬಿ ಎಚ್ ಕೆ ಅಪಾರ್ಟ್‌ಮೆಂಟ್‌ಗಳು ಆಧುನಿಕ ಜೀವನಕ್ಕೆ ಹೇಳಿ ಮಾಡಿಸಿದಂತಿವೆ. ಮೈಸೂರು ರಸ್ತೆ ಮತ್ತು ನೈಸ್ ರಸ್ತೆಯ ಸಮೀಪದಲ್ಲಿದೆ. ಶಾಂತಮಯ ವಾತಾವರಣ ಮತ್ತು ಉತ್ತಮ ಸಂಪರ್ಕ ಎರಡನ್ನೂ ಹೊಂದಿದೆ.

ಕೊಮ್ಮಘಟ್ಟ ಯೋಜನೆಯಲ್ಲಿ 2 ಬಿ ಎಚ್ ಕೆ ಮತ್ತು 3 ಬಿ ಎಚ್ ಕೆ ಎರಡೂ ಆಯ್ಕೆಗಳು ಲಭ್ಯ. ಯುವ ಕುಟುಂಬಗಳಿಗೆ ಮತ್ತು ವೃತ್ತಿನಿರತರಿಗೆ ಸೂಕ್ತ. ಹೊರವಲಯ ವರ್ತುಲ ರಸ್ತೆ ಮತ್ತು ಬೆಳೆಯುತ್ತಿರುವ ಮಾರ್ಗಗಳಿಗೆ ಸಮೀಪವಿರುವುದು ಭವಿಷ್ಯದಲ್ಲಿ ಉತ್ತಮ ಮೌಲ್ಯವನ್ನು ನೀಡುತ್ತದೆ.

ಹುಣ್ಣಿಗೆರಿಯಲ್ಲಿ ಅಚ್ಚುಕಟ್ಟಾದ ಯೋಜನೆ ಹೊಂದಿರುವ, ಹಸಿರಿನಿಂದ ಕೂಡಿದ ಪರಿಸರದಲ್ಲಿ ಪ್ರೀಮಿಯಂ 3 ಮತ್ತು 4 ಬಿ ಎಚ್ ಕೆ ವಿಲ್ಲಾಗಳಿವೆ. ಗೌಪ್ಯತೆ, ಸ್ಥಳ ಮತ್ತು ಸ್ವತಂತ್ರ ಜೀವನಶೈಲಿಯನ್ನು ಬಯಸುವ ಕುಟುಂಬಗಳಿಗೆ ಇದು ಉತ್ತಮವಾದ ಆಯ್ಕೆ.

ಈ ಫ್ಲಾಟ್ ಮೇಳ ಈ ಹಿಂದಿನ ಯಶಸ್ಸಿನಿಂದ ಸ್ಫೂರ್ತಿ ಪಡೆದಿದ್ದು ಗ್ರಾಹಕರಿಗೆ ನೇರವಾಗಿ ಮನೆಗಳನ್ನು ಒದಗಿಸುವ ದೃಷ್ಟಿ ಹೊಂದಿದೆ.

About The Author