ಮನೆಯಲ್ಲಿ ತುಂಟ ಮಕ್ಕಳೂ ಇರ್ತಾರೆ, ಒಳ್ಳೆ ಮಕ್ಕಳು ಇರ್ತಾರೆ, ನಾನು ಒಳ್ಳೆ ಮಗ: ಯತೀಂದ್ರ ಮಾತಿಗೆ ರವಿ ಹಾಸ್ಯ

Mandya News: ಮಂಡ್ಯದಲ್ಲಿ ಮಾಧ್ಯಮದ ಎದುರು ಮಾತನಾಡಿರುವ ಶಾಸಕ ರವಿ ಗಣಿಗ, ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಒಂದು ತಿಂಗಳು ಮೌನವ್ರತ ತಾಳಿದ್ದೇನೆ. ಒಂದು ತಿಂಗಳ ಬಳಿಕ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತೇನೆ. ಅವರು ಸಿಎಂ ಪುತ್ರ, ನಮ್ಮೆಲ್ಲರಿಗಿಂತ ಹೆಚ್ಚು ಜವಬ್ದಾರಿ ಇರುತ್ತದೆ. ಅಧಿಕಾರದಲ್ಲಿದ್ದವರು ಶಾಂತ ಸ್ವಭಾವದಿಂದ ಹೋಗಬೇಕು. ಮತ್ತೊಬ್ಬರನ್ನ ರೊಚ್ಚಿಗೇಳಿಸಲು ಹೋಗಬಾರದು ಎಂದು ರವಿಗಾಣಿಗ ಹೇಳಿದ್ದಾರೆ.

ಸಹೋದರನಾಗಿ ಯತೀಂದ್ರ ಸಿದ್ದರಾಮಯ್ಯ ಅವ್ರಿಗೆ ಈ ಮಾತು ಹೇಳ್ತಿದ್ದೇನೆ. ಕೆಲ MLAಗಳು ಒಂದು ಫಾರಂ ಹೌಸ್‌ನಲ್ಲಿ ಊಟಕ್ಕೆ ಸೇರಿದ್ರು. ದೊಡ್ಡಣ್ಣನವರ್ ಎಂಬುವರು ಊಟಕ್ಕೆ ಕರೆದಿದ್ರು. ಊಟಕ್ಕೆ ಸೇರಿದ ತಕ್ಷಣ ನಾಯಕತ್ವ ಬದಲಾವಣೆಗೆ ಅಂದ್ರೆ ಹೇಗೆ..? ಎಂದು ರವಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿದ್ದಾಗ ನಮ್ಮ ಮನೆಗೂ ಊಟಕ್ಕೆ ಬರ್ತಾರೆ. ಹಾಗಂದ ಮಾತ್ರಕ್ಕೆ ನಾಯಕತ್ವ ಬದಲಾವಣೆ ಅಂತ ಅಲ್ಲ. ಊಟಕ್ಕೆ ಸೇರಿದರೆ ಸಿಎಂ ಬದಲಾಗಲ್ಲ, ಹೈಕಮಾಂಡ್‌ ಹೇಳಿದ್ರೆ ಮಾತ್ರ ಬದಲಾವಣೆ. ಮನೆಯಲ್ಲಿ ತುಂಟ ಮಕ್ಕಳು ಇರ್ತಾರೆ, ಒಳ್ಳೆ ಮಕ್ಕಳು ಇರ್ತಾರೆ. ನಾನು ಮನೆಗೆ ಒಳ್ಳೆ ಮಗ ಎಂದು ರವಿಗಾಣಿಗ ಯತೀಂದ್ರ ಹೇಳಿಕೆಗೆ ಹಾಸ್ಯ ಮಾಡಿದ್ದಾರೆ.

About The Author