ಮದ್ಯದ ಬೆಲೆ ಏರಿಕೆಯಿಂದ ಬಿಯರ್ ಮಾರಾಟ ಭಾರೀ ಕುಸಿತ!

ರಾಜ್ಯದಲ್ಲಿ ಮದ್ಯದ ದರ ಏರಿಕೆಯು ವ್ಯಾಪಾರಕ್ಕೆ ಪೇಟು ಕೊಡುತ್ತಿದ್ದು, ಬಿಯರ್ ಮಾರಾಟವು ಭಾರೀ ಕುಸಿತದೊಂದಿಗೇ ಅಬಕಾರಿ ಇಲಾಖೆಯ ಆದಾಯ ಗುರಿ ಸಾಧನೆಯಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಹೆಚ್ಚುವರಿ ಅಬಕಾರಿ ಸುಂಕ ಏರಿಕೆಯಿಂದ ಮದ್ಯದ ವಹಿವಾಟು ಪಾತಾಳಕ್ಕೆ ಕುಸಿದಿದೆ. ಅಬಕಾರಿ ಇಲಾಖೆಯ ಆದಾಯ ಸಂಗ್ರಹಣೆಯು ಗುರಿಯನ್ನೂ ತಲುಪಲು ಸವಾಲಿನ ಎದುರಾಗಿದೆ.

ಕಳೆದ 8 ತಿಂಗಳಲ್ಲಿ ಬಿಯರ್ ಮಾರಾಟವು ಸರಾಸರಿ 51.17% ಹಾಗೂ ದೇಶೀಯ ಮದ್ಯ ವಹಿವಾಟು 4.36% ಕುಸಿತ ಕಂಡಿದೆ ಎಂದು ಅಬಕಾರಿ ವಲಯದ ವರದಿ ಹೇಳುತ್ತಿದೆ. ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಮದ್ಯದ ದರವನ್ನ ಸತತವಾಗಿ ಹೆಚ್ಚಿಸುತ್ತಿದೆ. ಜನವರಿ 20ರಿಂದ ಬಿಯರ್ ಮೇಲಿನ AED ಹೆಚ್ಚಳ ಜಾರಿಗೆ ಬಂದಿದ್ದು, ಸಾಮಾನ್ಯ ಬ್ಯಾಂಡ್‌ಗಳಿಂದ ಪ್ರೀಮಿಯಂ ಬಿಯರ್‌ಗಳವರೆಗೆ ಎಲ್ಲ ಬಗೆಯ ದರ ಏರಿಕೆಯಾಗಿತ್ತು.

ಪ್ರತಿ ಬಿಯರ್ ಬಾಟಲಿನ ದರ ಕನಿಷ್ಠ 10–50 ರೂ.ವರೆಗೆ ಹೆಚ್ಚಳ ಕಂಡಿದೆ. ಮೇ 15ರಿಂದ ಶೇ.195 ರಿಂದ ಶೇ.200ಕ್ಕೆ AED ಏರಿಕೆಯಾಗಿದ್ದು, ಶೇ.5ರಷ್ಟು ಹೆಚ್ಚಳವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಪಂಚ ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣಗಾಗಿ ಮದ್ಯದ ದರ ಮತ್ತು ಅಬಕಾರಿ ಇಲಾಖೆಯ ಆದಾಯ ಗುರಿಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ.

ಕಳೆದ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ 40,000 ಕೋಟಿ ರೂ. ಆದಾಯ ಗುರಿ ನೀಡಲಾಗಿತ್ತು. ಆದರೆ 35,530 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. 2023–24ರಲ್ಲಿ 34,629 ಕೋಟಿ ರೂ. ಸಂಗ್ರಹವಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಆದಾಯ ಗುರಿ 43,000 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ತಾಪಮಾನ ಏರಿದಂತೆ ಬಿಯರ್ ಸೇವನೆಯೂ ಹೆಚ್ಚಾಗುತ್ತದೆ.

ಬೇಸಿಗೆ ವೇಳೆ ಚೆಲ್ಟ್ ಬಿಯರ್ ಮದ್ಯ ಪ್ರಿಯರ ಆಯ್ಕೆಯ ಪಾನೀಯವಾಗಿದೆ. ಮಳೆಗಾಲ, ಚಳಿಗಾಲದಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ, ಈ ಬಾರಿ ಬೇಸಿಗೆಯಿಂದಲೂ ಬಿಯರ್‌ಗೆ ಬೇಡಿಕೆ ತಗ್ಗಿದೆ. ಇದೀಗ ಚಳಿಗಾಲ ಇರುವುದರಿಂದ ಕೆಲವರು ಬಿಯರ್ ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author