Web Story: ಇದಕ್ಕೂ ಮುನ್ನ ನಾವು ಯಾವ ಕಾರಣಗಳಿಂದ ಜನ ಬಡವರಾಗುತ್ತಿದ್ದಾರೆ ಅನ್ನೋ ವಿಷಯಕ್ಕೆ ಸಂಬಂದಿಸಿದಂತೆ 5 ವಿಷಯಗಳನ್ನು ತಿಳಿದಿದ್ದೆವು. ಇದೀಗ ಉಳಿದ 5 ವಿಷಯಗಳ ಬಗ್ಗೆ ತಿಳಿಯೋಣ.
ಇಮಿಟೇಶನ್ ಆಭರಣ ಧರಿಸೋದು: ಸಿನಿಮಾ ತಾರೆಯರು ಯಾವುದೋ ಬ್ರ್ಯಾಂಡೆಡ್ ಬ್ಯಾಗ್ ಬಳಸುತ್ತಾರೆ. ಯಾವುದೋ, ಆಭರಣ ಹಾಕುತ್ತಾರೆ. ತಾನೂ ಅಂಥದ್ದೇ ಹಾಕಬೇಕು ಅಂತಾ ಕೆಲವರು ಅವರನ್ನು ಫಾಲೋ ಮಾಡಲು ಹೋಗುತ್ತಾರೆ. ಆದರೆ ಇದು ನಿಜಕ್ಕೂ ಮೂರ್ಖತನ. ಏಕೆಂದರೆ, ಸಿನಿ ತಾರೆಯರು ಧರಿಸುವ, ಬಳಸುವ ವಸ್ತುಗಳು ಸಮಯಗಳೆದಂತೆ ಹೆಚ್ಚು ಬೆಲೆ ಬಾಳುತ್ತದೆ. ಏಕೆಂದರೆ ಅದು ಲಕ್ಷಾಂತರ ರೂಪಾಯಿದ್ದಾಗಿರುತ್ತದೆ. ಅದರಲ್ಲಿ ಚಿನ್ನ, ಬೆಳ್ಳಿ ಬಳಕೆ ಮಾಡಿರುತ್ತಾರೆ.
ಭವಿಷ್ಯದಲ್ಲಿ ಅದನ್ನು ಅವರು ಮಾರುತ್ತಾರೆ. ಮತ್ತು ಹಣ ಗಳಿಸುತ್ತಾರೆ. ಆದರೆ ನಿಮಗೆ ಸೇಲ್ ಮಾಡಿರುವ ಆಭರಣ ಬರೀ ನಕಲಿಯಾಗಿರುತ್ತದೆ. ಅದರಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. 2ರಿಂದ 3 ಬಾರಿ ನೀವು ಆ ಆಭರಣ ಧರಿಸುತ್ತೀರಿ. ಬಳಿಕ ಅದು ವಾರ್ಡ್‌ರೋಬ್ ನಲ್ಲೇ ಉಳಿಯುತ್ತದೆ. ಹಾಗಾಗಿ ಇನ್ನ“ಬ್ಬರನ್ನು ಕಾಪಿ ಮಾಡುವ ಬದಲು, ಜಾಣತನದಿಂದ ಆ ಹಣವನ್ನು ಹೂಡಿಕೆ ಮಾಡಿ.
ಲೋನ್ ಮಾಡಿ ಕಾರ್-ಬೈಕ್ ಖರೀದಿಸೋದು: ಲೋನ್ ಮಾಡಬಾರದು ಅಂತಾ ಯಾರೂ ಹೇಳುವುದಿಲ್ಲ. ಆದರೆ ಲೋನ್ ಮಾಡಿ ನೀವು ಶೋಕಿಗಾಗಿ ಕಾರ್-ಬೈಕ್ ಖರೀದಿಸಿದರೆ, ಅದು ನಿಮ್ಮ ಮೇಲೆ ಭಾರವಾಗುತ್ತದೆ. ಕಾರ್-ಬೈಕ್ ಅವಶ್ಯಕತೆ ತೀರಾ ಇದ್ದಾಗ ಮಾತ್ರ ನೀವು ಇಂಥ ನಿರ್ಧಾರ ತೆಗೆದುಕ“ಳ್ಳಬೇಕು. ಆದರೆ ಅವಶ್ಯಕತೆ ಇಲ್ಲದಿದ್ದರೂ ಲಕ್ಷ ಲಕ್ಷ ಹಣ ಸುರಿದು ಕಾರ್- ಬೈಕ್ ಖರೀದಿಸಿದರೆ, ಪಶ್ಚಾತಾಪ ಪಡಬೇಕಾಗುತ್ತದೆ.
ಬರ್ತ್‌ಡೇ ಪಾರ್ಟಿಗಾಗಿ ರಾಶಿ ರಾಶಿ ಹಣ ಖರ್ಚು ಮಾಡೋದು: ನಾಲ್ಕು ಫೋಟೋ , ವೀಡಿಯೋಗಾಗಿ ನೀವು ರಾಶಿ ರಾಶಿ ಹಣ ಖರ್ಚು ಮಾಡಿ ಬರ್ತ್‌ಡೇ ಪಾರ್ಟಿ ಮಾಡಿದ್ರೆ, ಅದರಿಂದೇನೂ ಪ್ರಯೋಜನವಿಲ್ಲ. ಅದರ ಬದಲು ಸಿಂಪಲ್ ಆಗಿ ಬರ್ತ್‌ಡೇ ಮಾಡಿ, ಉಳಿದ ಹಣವನ್ನು ಹೂಡಿಕೆ ಮಾಡಿ. ಅಥವಾ ಅದಾಗಲೇ ಹೂಡಿಕೆ ಮಾಡುತ್ತಿದ್ದಲ್ಲಿ. ಚೆಂದದ ಅನುಭವಕ್ಕಾಗಿ ಆ ದಿನ ಪ್ರವಾಸಕ್ಕೆ ಹೋಗಿ.
ಆಫರ್ ಇದೆ ಅಂತಾ ಸಿಕ್ಕ ಸಿಕ್ಕ ಗ್ಯಾಜೆಟ್ ಖರೀದಿಸೋದು: ದೀಪಾವಳಿ, ದಸರಾ, ಕ್ರಿಸ್‌ಮಸ್, ನ್ಯೂ ಇಯರ್ ಹೀಗೆ ಹಲವು ಹಬ್ಬಗಳು ಬಂದಾಗ, ಆಫರ್ ಇರುತ್ತದೆ. ಹೀಗೆ ಆಫರ್ ಇದೆ ಎಂದು ಸಿಕ್ಕ ಸಿಕ್ಕ ವಸ್ತುಗಳನ್ನು ನೀವು ಖರೀದಿ ಮಾಡಿದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ ವಿನಃ ನೀವು ಶ್ರೀಮಂತರಾಗುವುದಿಲ್ಲ.
ಶೋಕಿಗಾಗಿ ರೆಸ್ಟೋರೆಂಟ್‌ಗಳಿಗೆ ಹೋಗೋದು: ಹೋಟೇಲ್‌ಗೆ ಹೋಗಿ ತಿಂದು ಬರೋದು ತಪ್ಪಲ್ಲ. ಹಾಗಂತ ಎಕ್ಸ್‌ಪೆನ್ಸಿವ್ ರೆಸ್ಟೋರೆಂಟ್‌ಗೆ ಹೋಗ್ಬೇಕು, ವಾರಕ್ಕೆ 1 ಬಾರಿ ಅಂತೂ ಆಚೆ ತಿನ್ನಲೇಬೇಕು. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಸ್ವಿಗ್ಗಿಯಿಂದ ಆರ್ಡರ್ ಮಾಡ್ಲೇಬೇಕು ಅಂತೇನಾದ್ರೂ ರೂಲ್ಸ್ ಇದ್ರೆ, ನೀವು ಶ್ರೀಮಂತರಾಗಲೂ ಸಾಧ್ಯವಿಲ್ಲ. ಆರೋಗ್ಯವಂತರಾಗಲೂ ಸಾಧ್ಯವಿಲ್ಲ.




