Vidur Neeti: ಯಾರ್ಯಾರು ಮ್ಯೂಚುವಲ್ ಫಂಡ್ಸ್ ಬಳಸುತ್ತಾರೋ, ಅವರಿಗೆಲ್ಲಾ ಎಸ್ಐಪಿ ಬಗ್ಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಅಂದ್ರೆ ಪ್ರತೀ ತಿಂಗಳು ನಿಮ್ಮ ಕೈಲಾದಷ್ಟು ಹಣವನ್ನು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದನ್ನೇ ಎಸ್ಐಪಿ ಎನ್ನಲಾಗುತ್ತದೆ.
ಹೀಗೆ ಹೂಡಿಕೆ ಮಾಡಿದ್ದಲ್ಲಿ ಚಕ್ರಬಡ್ಡಿ ಎಲ್ಲ ಸೇರಿ 10 ವರ್ಷದ ಬಳಿಕ ಆ ಹಣ ಡಬಲ್ ಆಗಿರುತ್ತದೆ. ಹೆಚ್ಚು ಬಡ್ಡಿ ಬಂದ್ರೆ ಮೂರ್ನಾಲ್ಕು ಪಟ್ಟು ಹೆ’್’ಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಇದು ಇಂದು ನಿನ್ನೆಯ ಪ್ಲಾನ್ ಅಲ್ಲ. ಬದಲಾಗಿ ಇದು ಹಲವು ವರ್ಷಗಳ ಹಿಂದೆ ಅಂದ್ರೆ ಮಹಾಭಾರತ ಕಾಲದಲ್ಲೇ ಇದ್ದ ಪ್ಲಾನ್.
ವಿದುರ ನೀತಿಯಲ್ಲಿ ಈ ಬಗ್ಗೆ 1 ಕಥೆಯೂ ಇದೆ. 1 ಬಾರಿ ಓರ್ವ ಋಷಿ ತಮ್ಮ ಚದುರಂಗದ ಬೋರ್ಡ್ ಅಂದ್ರೆ ಚೆಸ್ ಬೋರ್ಡ್ ಹಿಡಿದು ರಾಜನ ಬಳಿ ಹೋದರು. ರಾಜನ ಎದುರು ನಿಂತು ಅತ್ಯುತ್ತಮವಾಗಿ ಚೆಸ್ ಆಡಿ ತೋರಿಸಿದರು. ಋಷಿಯ ಚದುರಂಗದಾಟದ ರೀತಿ ನೋಡಿ ರಾಜನಿಗೆ ಭಾರೀ ಖುಷಿಯಾಯ್ತು.
ಆಗ ರಾಜ ನಿಮಗೇನು ಬೇಕು ಎಂದು ಕೇಳಿದಾಗ, ಆ ಋಷಿ, ಇದೇ ಚದುರಂಗದ ಬೋರ್ಡ್ ಮೇಲೆ ನನಗೆ ಅಕ್ಕಿ ಬೇಕು. 1 ಚೌಕದಲ್ಲಿ 1 ಅಕ್ಕಿ, ಎರಡನೇಯ ಚೌಕದಲ್ಲಿ ಎರಡು ಅಕ್ಕಿ, ಮೂರನೇಯ ಚೌಕದಲ್ಲಿ ಮೂರು ಅಕ್ಕಿ ಕಾಳು. ಹೀಗೆ 1 ಚೌಕ ದಾಟುವಾಗ ಅಕ್ಕಿ ಸಂಖ್ಯೆ ಹೆಚ್ಚುತ್ತ ಹೋಗಬೇಕು ಎಂದು ಕೇಳುತ್ತಾನೆ.
ಅದಕ್ಕೆ ಉತ್ತರಿಸಿದ ರಾಜ. ನಾನು ಇಷ್ಟು ಶಕ್ತಿಶಾಲಿ ಸಾಮ್ರಾಜ್ಯದ ರಾಜ. ಬೇಕಾದಷ್ಟು ಧನ ಧಾನ್ಯ ಇರುವವನು. ನೀವು ನನ್ನ ಬಳಿ ಇಷ್ಟು ಚಿಕ್ಕ ಆಕಾಂಕ್ಷೆ ಕೇಳಿರುವಿರಿ ಅಲ್ಲ ಎಂದು ಹೇಳಿ, ರಾಜ ಋಷಿಯ ಮಾತಿನಂತೆ, ಚೌಕದಲ್ಲಿ ಅಕ್ಕಿ ಹಾಕಲು ಸೈನಿಕರಿಗೆ ಹೇಳುತ್ತಾನೆ. ರಾಜನ ಮಾತಿನಂತೆ ಸೈನಿಕರು ಚೌಕದಲ್ಲಿ ಅಕ್ಕಿ ಕಾಳು ಹಾಕುತ್ತ ಹೋಗುತ್ತಾರೆ.
ಆದರೆ ಕಡೆಯ ಹಂತಕ್ಕೆ ಬಂದು ತಲುಪುವಾಗ, ಅಕ್ಕಿಯ ಸಂಖ್ಯೆ ಕೋಟಿ ಬಂದು ತಲುಪಿತ್ತು. ಅಷ್ಟು ಅಕ್ಕಿ ಆ ಶಕ್ತಿಶಾಲಿ ರಾಜನ ಬಳಿ ಬಿಡಿ, ಇಡೀ ರಾಜ್ಯದಲ್ಲಿರುವ ಯಾರ ಬಳಿಯೂ ಇರಲಿಲ್ಲ. ಆಗ ರಾಜ ಋಷಿಗಳ ಬಳಿ ಕ್ಷಮೆಯಾಚಿಸುತ್ತಾನೆ. ಆಗ ಋಷಿಗಳು ಅಕ್ಕಿಯಾಗಲಿ, ಹಣವಾಗಲಿ ಅಭಿವೃದ್ಧಿಯಾದರೆ ಈ ರೀತಿಯ ಫಲಿತಾಂಶ ನೀಡುತ್ತದೆ ಎಂದು ಹೇಳುತ್ತಾರೆ. ಇದನ್ನೇ ನಾವಿಂದು ಎಸ್ಐಪಿ ಎಂದು ಹೂಡಿಕೆ ಮಾಡುತ್ತಿದ್ದೇವೆ.




