Spiritual: ನೀವು ರಸ್ತೆಯಲ್ಲಿ ಹೋಗುವಾಗ ನಿಮಗೆ ಹಣ ಸಿಕ್ಕಾಗ ನೀವೇನು ಮಾಡುತ್ತೀರಿ..? ಅದನ್ನು ತೆಗೆದು ಅಕ್ಕ ಪಕ್ಕದವರನ್ನು ವಿಚಾರಿಸುತ್ತೀರಿ. ಇಲ್ಲವೇ ಸುಮ್ಮನೆ ಕಿಸೆಗೆ ಹಾಕಿ ಹೋಗುತ್ತೀರಿ. ಬಳಿಕ ಅದನ್ನು ಖರ್ಚಿಗೆ ಬಳಸುತ್ತೀರಿ. ಆದರೆ ಇದು ಸರಿಯಾದ ವಿಧಾನವಲ್ಲ. ಹಾಾಗಾಗಿ ನಾವಿಂದು ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು ಎಂದು ವಿವರಿಸಲಿದ್ದೇವೆ.
ಶಾಸ್ತ್ರಗಳ ಪ್ರಕಾರ, ಹೀಗೆ ರಸ್ತೆಯಲ್ಲಿ ಹಣ ಸಿಗುವುದನ್ನು ಲಕ್ಷ್ಮೀ ದೇವಿಯ ಪರೀಕ್ಷೆ ಎಂದೇ ಹೇಳಲಾಗುತ್ತದೆ. ರಸ್ತೆಯಲ್ಲಿ ಸಿಕ್ಕ ಹಣವನ್ನು ಅಶುಭ ಎನ್ನಲಾಗುತ್ತದೆ. ಏಕೆಂದರೆ, ಆ ಹಣ ಯಾರದ್ದೋ, ಆ ವ್ಯಕ್ತಿಯ ಕರ್ಮ ಆ ಹಣದಲ್ಲಿ ಇರುತ್ತದೆ. ಆತ ಉತ್ತಮನಾಗಿದ್ದಲ್ಲಿ. ಆ ಹಣ ಉತ್ತಮ ಕರ್ಮದ ಫಲ ಪಡೆದಿರುತ್ತದೆ. ಇಲ್ಲವೇ ದುಷ್ಕರ್ಮದ ಫಲ ಪಡೆದಿರುತ್ತದೆ. ಹಾಗಾಗಿ ರಸ್ತೆಯಲ್ಲಿ ಸಿಕ್ಕ ಹಣ ಅಶುಭ ಅಂತಾ ಹಲವರು ಹೇಳುತ್ತಾರೆ.
ಹಾಗಾಗಿ ನೀವು ನಿಮಗೆ ಸಿಕ್ಕ ಹಣವನ್ನು, ಯಾರದ್ದೆಂದು ಪರಿಶೀಲಿಸಿ ನೀಡಿ. ಹಣದ ಕಳೆದುಕ“ಂಡವರು ಸಿಗದಿದ್ದಾಗ, ಆ ಹಣವನ್ನು ಅರಿಶಿನ ನೀರಿನಲ್ಲಿ ಕ್ಲೀನ್ ಮಾಡಿ, ದೇವರ ಮುಂದಿರಿಸಿ ಪ್ರಾರ್ಥಿಸಿ, ಅದನ್ನು ಬೀರುವಿನಲ್ಲಿ ಇರಿಸಬೇಕು. ಇದರಿಂದ ಹಣ ಶುದ್ಧವಾಗುತ್ತದೆ. ಈ ಹಣ ನೀವು ಖರ್ಚು ಮಾಡದೇ, ಬೀರುವಿನಲ್ಲಿ ಅಥವಾ ಪರ್ಸ್‌ನಲ್ಲೇ ಇರಿಸಿದರೆ ಉತ್ತಮ. ಆದರೆ ನೀವು ಇತರರ ಹಣದ ಮಾಲೀಕರಾದ ಕಾರಣ, ನಿಮ್ಮಿಂದ ಸಾಧ್ಯವಾದಷ್ಟು ದಾನ ಮಾಡಿ.




