Spiritual: ಈ ಮುಂಚಿನ ಭಾಗದಲ್ಲಿ ನಾವು ಶನಿದೇವನ ಕಾಲ ಮೇಲೆ ರಾವಣ ಗಧಾಪ್ರಹಾರ ಮಾಡಿದ್ದಕ್ಕಾಗಿ, ಶನಿ ನಿಧಾನ ಗತಿಯಲ್ಲಿ ಚಲಿಸುತ್ತಾನೆ ಅಂತಾ ಹೇಳಿದ್ದೆವು. ಈಗ ಶಿವನ ಕಥೆಯ ಪ್ರಕಾರ ಶನಿ ಏಕೆ ನಿಧಾನವಾಗಿ ಚಲಿಸುತ್ತಾನೆ ಅಂತಾ ತಿಳಿಯೋಣ.
ಶಿವ ತನ್ನ ಪರಮಭಕ್ತ ದದೀಚಿ ಮುನಿಯ ಮನೆಯಲ್ಲಿ ಪುತ್ರನಾಗಿ ಜನ್ಮ ತಾಳಿದ್ದ. ಆಗ ಬ್ರಹ್ಮದೇವರು ಈತನ ಹೆಸರನ್ನು ಪಿಪಲ್ಲಾದ ಎಂದು ನಾಮಕರಣ ಮಾಡಿದರು. ಆದರೆ ಪಿಪ್ಪಲ್ಲಾದ ಜನ್ಮಿಸುವ ಮುನ್ನವೇ ದದೀಚಿ ದೇಹತ್ಯಾಗ ಮಾಡಿದ್ದರು.
ಬಳಿಕ ಪಿಪಲ್ಲಾದ ಯುವಾಾವಸ್ಥೆಗೆ ಬಂದ ಬಳಿಕ, ತನ್ನ ತಂದೆಯ ಸಾವಿಗೆ ಕಾರಣವೇನು ಎಂದು ದೇವತಗೆಳಲ್ಲಿ ಪ್ರಶ್ನಿಸಿದನಂತೆ. ಆಗ ದೇವತೆಗಳು ನಿಮ್ಮ ತಂದೆಯ ರಾಶಿಯಲ್ಲಿ ಶನಿದೇವನ ಚಲನೆ ಇತ್ತು. ಈ ವೇಳೆ ನಿಮ್ಮ ತಂದೆಯ ಮರಣವಾಯಿತು ಎಂದು ಹೇಳುತ್ತಾರೆ.
ಇದರಿಂದ ಕೋಪಗ“ಂಡ ಪಿಪಲ್ಲಾದ ತನ್ನ ಬ್ರಹ್ಮದಂಡದಿಂದ ಶನಿಯ ಕಾಲ ಮೇಲೆ ಪ್ರಹಾರ ಮಾಡಿದನು. ಹೀಗಾಗಿ ಶನಿದೇವನ ಚಲನೆ ನಿಧಾನವಾಯಿತೆಂದು ಹೇಳುತ್ತಾರೆ.




