ಕರೊನಾ ಭೀತಿ ನಡುವೆಯೇ ಜೆಇಇ ಪರೀಕ್ಷೆ
ಕರೊನಾ ಮಹಾಮಾರಿ ಹರಡುವ ಆತಂಕದ ನಡುವೆಯೇ ರಾಜ್ಯದಲ್ಲಿ ಜೆಇಇ ಪರೀಕ್ಷೆ ಅಭ್ಯರ್ಥಿಗಳು ಹಾಜರಾಗಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಸೆಪ್ಟೆಂಬರ್ 1ರಿಂದ 6ರವರೆಗೂ ರಾಜ್ಯದಲ್ಲಿ ಜೆಇಇ ಪರೀಕ್ಷೆ ನಡೆಯಲಿದೆ. ಇನ್ನು ಈ ಸಂಬಂಧ ಪ್ರತಿಕ್ರಯಿಸಿದ ಡಿಸಿಎಂ ಅಶ್ವತ್ಥ ನಾರಾಯಣ್.. ರಾಜ್ಯದಲ್ಲಿ ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ಜೆಇಇ ಪರೀಕ್ಷೆ ನಡೆಯುತ್ತಿದ್ದು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಅಂಥಾ ಮಾಹಿತಿ ನೀಡಿದ್ರು.

ದೇಗುಲಗಳು ರೀ ಓಪನ್; ಭಕ್ತರಿಗಿದೆ ಕಂಡೀಷನ್ಸ್
ರಾಜ್ಯದಲ್ಲಿ ಅನ್ಲಾಕ್ 4.0 ಜಾರಿಯಲ್ಲಿದ್ದು ಇದರನ್ವಯ ದೇಗುಲಗಳು ಮಂಗಳವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಿವೆ. ಆದ್ರೆ ಭಕ್ತರ ದೇಗುಲ ಭೇಟಿ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕೆಲ ಷರತ್ತುಗಳನ್ನ ವಿಧಿಸಿದ್ದಾರೆ.
ಅನ್ಲಾಕ್ 4.0ನಲ್ಲಿ ದೇವಸ್ಥಾನದ ಎಲ್ಲಾ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಅನ್ನದಾನ, ಹೆಚ್ಚು ಜನ ಸೇರುವಂತಹ ರಥೋತ್ಸವ ಆಚರಣೆಗೆ ಇರುವ ನಿರ್ಬಂಧ ಮುಂದುವರಿಯಲಿದೆ ಅಂತಾ ಕೋಟಾ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ರು.
ಚೀನಾ ಕುತಂತ್ರದ ಬಳಿಕ Lac ಬಳಿ ಹೈ ಅಲರ್ಟ್..!
ಲಡಾಖ್ ಗಡಿಯಲ್ಲಿ ಮತ್ತೆ ಚೀನಾ ಕಿರಿಕ್ ಮಾಡ್ತಿದ್ದಂತೆ ಭಾರತೀಯ ಸೇನೆ ಹೈ ಅಲರ್ಟ್ ಆಗಿದೆ. ಪ್ಯಾಂಗ್ಯಾಂಗ್ ಭಾಗದಲ್ಲಿ ಚೀನಾ ಅತಿಕ್ರಮಣ ಯತ್ನ ಬೆನ್ನಲ್ಲೇ ಗಡಿಯಲ್ಲಿ ಹೆಚ್ಚುವರಿ ಸೇನೆಯನ್ನ ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಲಡಾಖ್ನ ಪಿಥೋರಾಗಟ್ ಜಿಲ್ಲೆಯಲ್ಲೂ ಭಾರತೀಯ ಸೇನೆ ಹೈ ಅಲರ್ಟ್ ಆಗಿದೆ. ಜಿ 20 ಫೈಟರ್ ಜೆಟ್ ವಿಮಾನವನ್ನ ಲಡಾಖ್ನಲ್ಲಿ ಸನ್ನದ್ಧಗೊಳಿಸಿದ್ದ ಚೀನಾ ಶನಿವಾರ ರಾತ್ರಿ ಪ್ಯಾಂಗ್ಯಾಂಗ್ ಸರೋವರ ಭಾಗದಲ್ಲಿ ಅತಿಕ್ರಮಣಕ್ಕೆ ಯತ್ನಿಸಿ ಮುಖಭಂಗಕ್ಕೀಡಾಗಿತ್ತು
ಎಂಟಿಬಿ, ವಿಶ್ವನಾಥ್, ಶಂಕರ್ಗೆ ನೋಟಿಸ್..!
ವಿಧಾನಪರಿಷತ್ಗೆ ಆಯ್ಕೆಯಾಗಿರೋ ಎಂಟಿಬಿ ನಾಗರಾಜು, ಆರ್.ಶಂಕರ್ ಹಾಗೂ ವಿಶ್ವನಾಥ್ಗೆ ಮಂತ್ರಿಪದವಿ ನೀಡದಂತೆ ಸರ್ಕಾರಕ್ಕೆ ಸೂಚಿಸುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ಕಾನೂನು ಇಲಾಖೆ ಹಾಗೂ ಮೂವರು ಸದಸ್ಯರಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣಾ ಅರ್ಜಿ ಸಲ್ಲಿಸುವಂತೆ ಅವಕಾಶ ನೀಡಿದೆ.
‘ಡ್ರಗ್ಸ್ ಹಾದಿಗೆ ಚಿತ್ರರಂಗ ಬರಬಾರದು’
ಸ್ಯಾಂಡಲ್ವುಡ್ನಲ್ಲಿ ಕೆಲ ದಿನಗಳಿಂದ ಸಂಚಲನ ಸೃಷ್ಟಿಸಿರೋ ಡ್ರಗ್ಸ್ ಮಾಫಿಯಾ ಆರೋಪದ ಬಗ್ಗೆ ಹಿರಿಯ ನಟಿ ತಾರಾ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು.. ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ದುರ್ನಾತ ಬಡಿಯದಿರಲಿ ಅಂತಾ ದೇವರಲ್ಲಿ ಪ್ರಾರ್ಥಿಸಿದ್ದೇನೆ. ನಮ್ಮನ್ನ ಫಾಲೋ ಮಾಡೋರು ಅನೇಕರು ಇರ್ತಾರೆ. ನಾವು ನಮ್ಮ ಜನಾಂಗಕ್ಕೆ ಮೋಸ ಮಾಡಬಾರದು. ಶ್ರೀಲಂಕಾದಲ್ಲಿ ಡ್ರಗ್ಸ್ ದಂಧೆ ಮಾಡಿದ್ರೆ ಗಲ್ಲಿಗೆ ಹಾಕ್ತಾರೆ. ನಮ್ಮಲ್ಲೂ ಇಂತಹ ಕಠಿಣ ಕ್ರಮ ಜಾರಿಗೆ ಬರಬೇಕು, ನಾವು ಎಲ್ಲ ಬೆಳವಣಿಗೆಗಳನ್ನ ವೀಕ್ಷಿಸುತ್ತಾ ಇದ್ದೇವೆ. ಈ ವಿಚಾರವಾಗಿ ಸಿಎಂಗೆ ಪತ್ರ ಬರೆಯಲಿದ್ದೇನೆ ಅಂತಾ ಹೇಳಿದ್ರು.
ಯಶ್- ರಾಧಿಕಾ ಪುತ್ರನಿಗೆ ನಾಮಕರಣ
ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ ಕ್ವೀನ್ ರಾಧಿಕಾ ಪಂಡಿತ್ ದಂಪತಿ ಪುತ್ರನಿಗೆ ಯಥರ್ವ ಅಂತಾ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿರೋ ರಾಧಿಕಾ ದಂಪತಿ ರಾರಾಜಿಸೋ ಮಗನೇ ಹರಸಿ ಹಾರೈಸಿ ಅಂತಾ ಬರೆದುಕೊಂಡಿದ್ದಾರೆ. ಯಥರ್ವ ಯಶ್ ನಾಮಕರಣದಲ್ಲಿ ತಿಳಿ ಗುಲಾಬಿ ಬಣ್ಣದ ಬಟ್ಟೆ ಧರಿಸಿರೋ ಐರಾ ಮುದ್ದಾಗಿ ಕಾಣ್ತಿದ್ದಾಳೆ. ಇನ್ನು ಯಥರ್ವ ನಾಮಕರಣದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

