Sports News: ಮುಂಬರುವ ಐಪಿಎಲ್ ಮ್ಯಾಚ್ನಲ್ಲಿ ಗುಜರಾತ್ ತಂಡದಲ್ಲಿ ಮಿಂಚಲು ರೆಡಿಯಾಗಿರುವ ವೇಗಿ ಇಶಾಂತ್ ಶರ್ಮಾ, ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಹೋಗಿ, ಆಂಜನೇಯನ ದರ್ಶನ ಪಡೆದಿದ್ದಾರೆ.
ಇಲ್ಲಿನ ಆಂಜನೇಯನ ಗುಡಿಗೆ ಹೋಗಿ ದೇವರ ದರ್ಶನ ಪಡೆಯಲು, 575 ಮೆಟ್ಟಿಲುಗಳನ್ನು ಏರಬೇಕು. ಇಶಾಂತ್ ಕೂಡ 575 ಮೆಟ್ಟಿಲುಗಳನ್ನು ಏರಿ, ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾದ ವೇಗದ ಬೌಲರ್ ಅಂತಲೇ ಗುರುತಿಸಿಕ“ಂಡಿರುವ ಇಶಾಂತ್ ಶರ್ಮಾ 2021ರ ಬಳಿಕ ಟೀಂ ಇಂಡಿಯಾದಿಂದ ಆಚೆ ಇದ್ದಾರೆ.
ಇದೀಗ ಮುಂಬರುವ ಐಪಿಎಲ್ ಮ್ಯಾಚ್ನಲ್ಲಿ ಗುಜರಾತ್ ಟೈಟನ್ಸ್ನಲ್ಲಿ ಇಶಾಂತ್ ಶರ್ಮಾ ಆಡಲಿದ್ದಾರೆ. 75 ಲಕ್ಷ ರೂಪಾಯಿಗೆ ಇಶಾಂತ್ ಶರ್ಮಾರನ್ನು ಗುಜರಾತ್ ಟೈಟನ್ಸ್ ಖರೀದಿಸಿದ್ದು, ಈ ಬಾರಿ ಅತ್ಯದ್ಭುತ ಪ್ರದರ್ಶನ ತೋರಲು ಶಕ್ತಿ ನೀಡು ಎಂದು ಇಶಾಂತ್ ಆಂಜನೇಯನಲ್ಲಿ ಪ್ರಾರ್ಥಿಸಿದ್ದಾರೆ.




