Health Insurance: ಜೀವನದಲ್ಲಿ ಹೂಡಿಕೆ ಎಷ್ಟು ಮುಖ್ಯವೋ..? ಹೆಲ್ತ್ ಇನ್ಶೂರೆನ್ಸ್, ಟರ್ಮ್ ಇನ್ಶುರೆನ್ಸ್ ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಇನ್ಶೂರೆನ್ಸ್ ಬಗ್ಗೆ ಹೂಡಿಕೆ ಸಲಹೆಗಾರರಾಗಿರುವ ಡಾ.ಭರತ್ ಚಂದ್ರ ಅವರು ಏನು ಹೇಳಿದ್ದಾರೆ ಎಂದು ಕೇಳಿ.
ನೀವು ಚೆನ್ನಾಗಿ ದುಡಿಯುತ್ತಿದ್ದೀರಿ. ಹೂಡಿಕೆ ಮಾಡುತ್ತಿದ್ದೀರಿ. ಆದರೆ ನಾನು ಹೆಲ್ತ್ ಇನ್ಶುರೆನ್ಸ್ ಮಾಡಿಸುವುದಿಲ್ಲ ಅಂತಿದ್ದರೆ, ಸ್ಕೂಟಿ ಓಡಿಸುತ್ತೇನೆ. ಆದರೆ ಹೆಲ್ಮೆಟ್ ಹಾಕಲ್ಲ ಅಂದಹಾಗೆ. ಇದರ ಅರ್ಥ ಏನೆಂದರೆ, ಹೆಲ್ಮೆಟ್ ಹಾಕದೇ ನೀವು ಬೆಂಗಳೂರಿನಂಥ ಊರಿನಲ್ಲಿ ಗಾಡಿಯಲ್ಲಿ ಸುತ್ತಿದರೆ, ಅಪಘಾತವಾಗೋದು ಖಚಿತ. ಅದೇ ರೀತಿ ಇನ್ಶೂರೆನ್ಸ್ ವ್ಯರ್ಥವೆಂದು ನೀವು ತಿಳಿದು, ಬರೀ ಉಳಿಕೆ, ಹೂಡಿಕೆ ಮಾಡಿದರೆ, 1 ದಿನ ಅನಾರೋಗ್ಯವಾದಾಗ ಖಂಡಿತ ಆ ಉಳಿತಾಯವೆಲ್ಲವೂ ಆಸ್ಪತ್ರೆ ಸೇರಿ, ನಿಮ್ಮನ್ನು ಬಡವನನ್ನಾಗಿಸುತ್ತದೆ. ಹಾಗಾಗಿ ಹೆಲ್ತ್ ಮತ್ತು ಟರ್ಮ್ ಇನ್ಶೂರೆನ್ಸ್ ತುಂಬಾ ಮುಖ್ಯ .
1 ದಿನ ಐಸಿಯುನಲ್ಲಿ ಇದ್ದರೆ ಸಣ್ಣ ಆಸ್ಪತ್ರೆಯಲ್ಲೇ 25ರಿಂದ 50 ಸಾವಿರದವರೆಗೆ ಖರ್ಚಾಗುತ್ತದೆ. ಅದೇ ನೀವು ಹೆಲ್ತ್ ಇನ್ಶುರೆನ್ಸ್ ಮಾಡಿಸಿದರೆ, ತಿಂಗಳಿಗೆ 500ರಿಂದ ಸಾವಿರ ಕಟ್ಟಿದರೂ ಸಾಕು. ನಿಮಗೆ ಲಕ್ಷ ಲಕ್ಷ ವಿಮೆ ಸಿಗುತ್ತದೆ. ಹಾಗಾಗಿ ಹೆಲ್ತ್ ಇನ್ಶುರೆನ್ಸ್ ಅನ್ನೋದು ತುಂಬಾ ಮುಖ್ಯ. ಆದರೆ ಕೆಲವು ಬಾರಿ ನಾವು ಇನ್ಶುರೆನ್ಸ್ ಕಟ್ಟಿದ್ರೂ ಕೂಡ ನಮಗೆ ಆ ಹಣ ಸಿಗುವುದಿಲ್ಲ. ಹಾಗಾದ್ರೆ ಯಾಕೆ ಇನ್ಶುರೆನ್ಸ್ ಹಣ ಸಿಗೋದಿಲ್ಲ..? ನಾವು ಮಾಡುವ ತಪ್ಪಾದ್ರೂ ಏನು ಅಂತಾ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




