Sunday, December 22, 2024

Latest Posts

ಸತ್ಯ ಗೊತ್ತಿದ್ರೂ ರಾಮುಲು ಸುಮ್ಮನಿದ್ರು ಯಾಕೆ? – ಪೇಚಿಗೆ ಸಿಲುಕಿದ ಬಿಜೆಪಿ ಮುಖಂಡ

- Advertisement -

ಹುಬ್ಬಳ್ಳಿ-ಧಾರವಾಡ: ಮೈತ್ರಿ ಸರ್ಕಾರದ ಕಿರುಕುಳವೇ ಸಿ.ಎಸ್ ಶಿವಳ್ಳಿ ಸಾವಿಗೆ ಕಾರಣ ಅನ್ನೋ ಹೇಳಿಕೆ ಇದೀಗ ಮತ್ತೊಂದು ತಿರುವು ಪಡೆದಿದ್ದು ಬಿಜೆಪಿ ಮುಖಂಡ ಶ್ರೀರಾಮುಲು ಪೇಚಿಗೆ ಸಿಲುಕಿದ್ದಾರೆ.

ಹುಬ್ಬಳ್ಳಿಯಲ್ಲಿ ನಿನ್ನೆ ಬಿಜೆಪಿ ಉಪಚುನಾವಣಾ ಅಭ್ಯರ್ಥಿ ಚಿಕ್ಕನಗೌಡರ ಪರ ಪ್ರಚಾರ ನಡೆಸ್ತಿದ್ದ ವೇಳೆ ಮಾತನಾಡಿದ ಶ್ರೀರಾಮುಲು, ಮೈತ್ರಿ ಸರ್ಕಾರದ ವಿರುದ್ಧ ಮಾತನಾಡೋ ಭರಾಟೆಯಲ್ಲಿ ಮಾಜಿ ಸಚಿವ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ ಕಾರಣ ಅಂತ ಹೇಳಿಬಿಟ್ರು.  ಶ್ರೀರಾಮುಲು ಈ ಹೇಳಿಕೆ ನೀಡಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶ್ರೀರಾಮುಲು ಹೇಳಿಕೆಯನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ತೀರ್ಮಾನಿಸಿದ್ದೇವೆ. ಶ್ರೀರಾಮುಲು ಕೂಡ ಪೊಲೀಸರಿಗೆ ದೂರು ನೀಡಿ ನಾವು ಶಿವಳ್ಳಿಯವರಿಗೆ ಯಾವ ರೀತಿ ಕಿರುಕುಳ ನೀಡಿದ್ದೆವು ಅಂತ ಹೇಳಲಿ ಅಂತ ಹುಬ್ಬಳ್ಳಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಶಿವಳ್ಳಿಯವರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಮುಲು ಇಂತಹ ಮಾತುಗಳನ್ನಾಡಿ ತಮ್ಮ ಗೌರವ ಕಳೆದುಕೊಂಡಿದ್ದಾರೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ಬಹಳ ನೋವಾಗಿದೆ ಅಂತ ಸಚಿವ ಡಿ.ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ರು.

ಶ್ರೀರಾಮುಲು ವಿರುದ್ಧ ಡಿಸಿಗೆ ದೂರು

ಇನ್ನು ಧಾರವಾಡದಲ್ಲಿ ಇದೇ ವಿಚಾರವಾಗಿ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಮತ್ತು ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ವಿರುದ್ಧ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದಾರೆ. ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಧಾರವಾಡ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಬಿಜೆಪಿ ಮುಖಂಡರು ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಹಾಗೂ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಅಂತ ಆರೋಪಿಸಿ ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮುಲು ಹೇಳಿಕೆ ನೀಡಿರೋ ವಿಡಿಯೋವುಳ್ಳ ಪೆನ್ ಡ್ರೈವ್ ಸಹ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಂಸದ ವಿ.ಎಸ್ ಉಗ್ರಪ್ಪ, ಶ್ರೀರಾಮುಲುರವರಿಗೆ ಶಿವಳ್ಳಿ ಸಾವು ಕಿರುಕುಳದಿಂದಲೆ ಸಂಭವಿಸಿದೆ ಅಂತ ಗೊತ್ತಿದ್ದೂ ಸುಮ್ಮನಿದ್ದದ್ದು ಯಾಕೆ? ಈ ಕೃತ್ಯದ ಬಗ್ಗೆ ಮಾಹಿತಿ ಗೊತ್ತಿದ್ದೂ ಮುಚ್ಚಿಡೋದು ಕೂಡ ಒಂದು ಅಪರಾಧ ಅಂತ ಹೇಳಿದ್ದಾರೆ.

- Advertisement -

Latest Posts

Don't Miss