Wednesday, June 7, 2023

Latest Posts

ಪೌರತ್ವ ತಕರಾರಿಗೆ ಫುಲ್ ಸ್ಟಾಪ್- ರಾಹುಲ್ ಗಾಂಧಿಗೆ ಬಿಗ್ ರಿಲೀಫ್

- Advertisement -

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವ ವಿವಾದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಅಂತ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಅಮೇಥಿ ಮತ್ತು ವಯನಾಡು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರೋ ರಾಹುಲ್ ಗಾಂಧಿ ನಾಮಪತ್ರದೊಂದಿಗೆ ಬ್ರಿಟನ್ ನಲ್ಲಿ ಹೊಂದಿರೋ ವ್ಯವಹಾರದ ದಾಖಲೆಗಳನ್ನ ಸಲ್ಲಿಸಿದ್ರು. ಆ ದಾಖಲೆಗಳಲ್ಲಿ ರಾಹುಲ್ ಗಾಂಧಿ ಬ್ರಿಟನ ಪ್ರಜೆ ಅಂತ ನಮೂದಾಗಿತ್ತು. ಹೀಗಾಗಿ ರಾಹುಲ್ ಭಾರತದ ಪ್ರಜೆ ಅಲ್ಲ, ಅವರ ನಾಮಪತ್ರ ತಿರಸ್ಕರಿಸಬೇಕು ಅಂತ ಮೊದಲು ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದ್ರೆ ಚುನಾವಣಾ ಆಯೋಗ ಈ ಅರ್ಜಿಯನ್ನ ತಿರಸ್ಕರಿಸಿತ್ತು. ನಂತರ ಮತ್ತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಉಚ್ಚನ್ಯಾಯಾಲಯವೂ ಅರ್ಜಿಯನ್ನ ತಿರಸ್ಕರಿಸಿದ್ದು ರಾಹುಲ್ ಗಾಂಧಿ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ, ‘ಕೆಲ ಕಂಪನಿಗಳು ತಮ್ಮ ಅರ್ಜಿಯಲ್ಲಿ ಬ್ರಿಟನ್ ಪೌರ ಅಂತ ಬರೆದಾಕ್ಷಣ ರಾಹುಲ್ ಬ್ರಿಟನ್ ಪ್ರಜೆ ಆಗ್ತಾರಾ?’ ಅಂತ ಪ್ರಶ್ನಿಸಿ ಅರ್ಜಿಯನ್ನು ತಿರಸ್ಕರಿಸಿದೆ.

- Advertisement -

Latest Posts

Don't Miss