Sandalwood: ಸಿನಿಮಾ ತರಬೇತಿ ನೆಪದಲ್ಲಿ ಅಮಾಯಕ ಮಕ್ಕಳಿಗೆ ಮೋಸ : Duniya Vijay Podcast

Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ಯಾವ ರೀತಿಯಾಗಿ ಹೆಸರು ಮಾಡಬೇಕು ಅಂತಾ ಆಸೆಯಿಂದ ಬರುವ ಅಮಾಯಕ ಮಕ್ಕಳ ಬಳಿ ಹಣ ಕಸಿದು, ತರಬೇತಿ ನೆಪದಲ್ಲಿ ಕೆಲವರು ಮೋಸ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀರೋ ಆಗಬೇಕು ಎಂದು ಬರುವ ಅಮಾಯಕರ ಬಳಿ ಸಿನಿಮಾ ತರಬೇತಿ ಹೆಸರಿನಲ್ಲಿ ಹಣ ಕಸಿದು, 3ರಿಂದ 4 ತಿಂಗಳು 40-50 ಸಾವಿರ ರೂಪಾಯಿ ಫೀಸ್ ಎಂದು ಹಣ ಪಡೆದು, ಮೋಸ ಮಾಡಲಾಗುತ್ತಿದೆ. ಅಲ್ಲದೇ ಬೇರೆ ಬೇರೆ ಕಲಾವಿದರ ಜತೆ ತೆಗೆಸಿದ ಫೋಟೋ ತೋರಿಸಿ, ಮುಂದೆ ನೀನು ಹಿಂಗೆ ಆಗ್ತೀಯಾ ಎಂದು ನಂಬಿಸಲಾಗುತ್ತಿದೆ. ಪಾಪ ಆ ಅಮಾಯಕರು ಅದನ್ನೇ ನಂಬಿ, ಹೇಗೋ ಹಣ ಮಾಡಿ, ಫೀಸ್ ಆಗಿ ಅಂಥವರಿಗೆ ನೀಡುತ್ತಿದ್ದಾರೆ. ಇಂಥ ರೋಲ್‌ಕಾಲ್ ಆಫೀಸ್‌ಗಳನ್ನು ನಿಲ್ಲಿಸಬೇಕು ಎಂದು ದುನಿಯಾ ವಿಜಿ ಆಗ್ರಹಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author