Sandalwood: ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರು ತಮಿಳು ನಿರ್ಮಾಪಕ ಸುಂದರನ್ ಜತೆ ಇದೇ ವರ್ಷ ಜುಲೈ 12ರಂದು ಸಪ್ತಪದಿ ತುಳಿದಿದ್ದರು. ಇದೀಗ ಶರ್ಮಿಳಾ ಗುಡ್ ನ್ಯೂಸ್ ನೀಡಿದ್ದು, ತಾಯಿಯಾಗುತ್ತಿರುವ ಸಂತೋಷದ ವಿಷಯವನ್ನು ಶೇರ್ ಮಾಡಿದ್ದಾರೆ.
ಈ ಬಗ್ಗೆ ಇನ್ಸ್ಟಾ ಖಾತೆಯನ್ನು ಫೋಟೋ ಶೇರ್ ಮಾಡಿರುವ ದಂಪತಿ, ತಮ್ಮ ಬೆರಳಿನಿಂದ ಸಣ್ಣ ಮಗುವಿನ ಶೂಸ್ ಹಿಡಿದಿದ್ದಾರೆ. ಅಲ್ಲದೇ ಇದಕ್ಕೆ ಪುಟ್ಟ ಹೆಜ್ಜೆಗಳು ಅಂತಾ ಕ್ಯಾಪ್ಶನ್ ಕೂಡ ನೀಡಿದ್ದಾರೆ. ಸೆಲೆಬ್ರಿಟಿಗಳು ಇವರ ಪೋಸ್ಟ್ಗೆ ಕಮೆಂಟ್ ಮಾಡಿ ವಿಶ್ ಮಾಡಿದ್ದಾರೆ.
ರಾಜಸ್ಥಾನದ ಜೈಪುರ್ನಲ್ಲಿರುವ ಅರಮನೆಯಲ್ಲಿ ಶರ್ಮಿಳಾ ಮತ್ತು ಸುಂದರನ್ ಸಂಬಂಧಿಕರು ಮತ್ತು ಆಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಅದಕ್ಕೂ ಮುನ್ನ ಸೆಲೆಬ್ರಿಟಿ ಸ್ನೇಹಿತರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಜೂನ್ 25ಕ್ಕೆ ನಿಶ್ಚಿತಾರ್ಥ ನಡೆದಿತ್ತು. ಇದೀಗ ಶರ್ಮಿಳಾ ತಾಯಿಯಾಗುವ ಮೂಲಕ ಗುಡ್ನ್ಯೂಸ್ ಶೇರ್ ಮಾಡಿದ್ದಾರೆ.




