Bengaluru: ಬೆಂಗಳೂರಿನಲ್ಲಿದ್ದು ಕನ್ನಡ ಮಾತನಾಡಲು ಪ್ರಯತ್ನ ಪಡದವರು, ಕನ್ನಡವನ್ನು ಅವಮಾನಿಸುಿವವರು, ಕನ್ನಡಕ್ಕೆ ಬೆಲೆ ನೀಡದವರನ್ನು ಕಂಡ್ರೆ ಕನ್ನಡಿಗರಿಗೆ ಹೇಗನ್ನಿಸುತ್ತೆ. ಈಗಲೇ ಕಾಲರ್ ಹಿಡಿದು, ಆಚೆ ದಬ್ಬಿಬಿಡಬೇಕು ಅನ್ನುವಷ್ಟು ಕೋಪ ಬರತ್ತೆ. ಆದರೂ ಕೆಲವರಿಗೆ ಆ ಕೆಲಸ ಮಾಡಲು ಸಾಧ್ಯವಾಗಲ್ಲ. ಯಾಕಂದ್ರೆ, ಅವರು ಇಲ್ಲಿ ಸರ್ಕಾರದ ಪರವಾನಗಿ ಪಡೆದು, ವ್ಯಾಪಾರ ನಡೆಸುತ್ತಿರುತ್ತಾರೆ.
ಅಂಥವರಿಗೆ ಸೋಶಿಯಲ್ ಮೀಡಿಯಾ ಮೂಲಕ ಬುದ್ಧಿ ಕಲಿಸಬಹುದೇ ವಿನಃ ನಾವಾಗೇ ಏನು ಮಾಡಲು ಸಾಧ್ಯವಿಲ್ಲ. ಈ ಮಾತುಗಳ್ಯಾಕೆ ಹೇಳುತ್ತಿರೋದು ಅಂದ್ರೆ, ಬೆಂಗಳೂರಿನ ಕೋರಮಂಗಲದಲ್ಲಿರುವ ಕನ್ನು ಕೀ ಚಾಯ್ ಎಂಬ ಚಹಾ ಅಂಗಡಿಯಲ್ಲಿ ಚಹಾ ಕಪ್ನಲ್ಲಿ ಹಲವು ಭಾಷೆಗಳಲ್ಲಿ ಕನ್ನು ಕೀ ಚಾ ಅಂತಾ ಬರೆಯಲಾಗಿದೆ. ಆದರೆ ಕನ್ನಡದಲ್ಲಿ ಮಾತ್ರ ಪ್ರಿಂಟ್ ಹಾಕಲಾಗಿಲ್ಲ.
ಇಲ್ಲಿನ ರೆಗ್ಯೂಲರ್ ಗ್ರಾಹಕರಾಗಿರುವ ಉದಯಾ ಮ್ಯೂಸಿಕ್ ನಿರೂಪಕ ಮಿಲಿಂದ್ ಗಾಂವ್ಕರ್ ಅವರು ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಮಾಡಿ, ಮಾತನಾಡಿದ್ದು, ಮನುಷ್ಯ ಎಷ್ಟೇ ಬೆಳೆದರೂ ಕೂಡ, ತಾನು ನಡೆದು ಬಂದ ದಾರಿಯ ಬಗ್ಗೆ ಮರೆಯಬಾರದು. ಕೃತಜ್ಞತೆ ಇರಬೇಕು. ತನ್ನ ಬೆಳವಣಿಗೆಗೆ ಕಾರಣವಾದ ಭೂಮಿಗೆ ಆತ ಕೃತಜ್ಞನಾಗಿರಬೇಕು. ಇವನ ಯೋಗ್ಯತೆಗೆ ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಕನ್ನು ಕೀ ಚಾಯ್ ಅಂತಾ ಹಾಕಿದ್ದಾನೆ. ಆದರೆ ಕನ್ನಡದಲ್ಲಿ ಹಾಕುವ ಮನೋಭಾವ ಇವನಲ್ಲಿ ಇಲ್ಲ.
ಇವನಿಗೆ ಲೈಸೆನ್ಸ್ ನೀಡಿದವನಿಗೆ ಬೈಯ್ಯಬೇಕೋ, ಓನರ್ಗೆ ಬೈಯ್ಯಬೇಕೋ, ಅಥಾವ ಚಹಾ ಕುಡಿಯೋಕ್ಕೆ ಇಲ್ಲಿ ಬಂದಿದ್ದೇವಲ್ಲ. ನಮಗೆ ನಾವೇ ಬೈಕೋಬೇಕೋ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇದರ ಮಾಲೀಕನ ಹೆಸರನ್ನು ಹಾಕಿ, ಕನ್ನಡಕ್ಕೂ ಮಾನ್ಯತೆ ನೀಡಿ ಎಂದು ಇಂಗ್ಲೀಷಿನಲ್ಲಿ, ಅವನಿಗೆ ಅರ್ಥವಾಗುವ ಭಾಷೆಯಲ್ಲೇ ಹೇಳಿದ್ದಾರೆ. ಕೃತಜ್ಞತೆ ಅಂತೂ ಆ ವ್ಯಕ್ತಿಗಿಲ್ಲ. ಹೇಳಿದ್ದನ್ನು ಕೇಳಿಯಾದರೂ ಆತ, ಕನ್ನಡದಲ್ಲಿ ಬರೆಸುತ್ತಾನಾ ಅಂತಾ ಕಾದು ನೋಡಬೇಕಿದೆ.
ನಿರೂಪಕ ಮಿಲಿಂದ್ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ




