ನಾನು ಮುಸ್ಲಿಂ ಎಂಬ ಕಾರಣಕ್ಕೆ ನನಗೆ ಬಹುಷಃ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ: ಎ.ಆರ್.ರಹಮಾನ್

Bollywood: ಆಸ್ಕರ್ ವಿಜೇತ, ಸಂಗೀತಗಾರ ಎ.ಆರ್.ರಹಮಾನ್ ಸಂದರ್ಶನದಲ್ಲಿ ಮಾತನಾಡಿ, 8 ವರ್ಷಗಳಿಂದ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ. ಕಾರಣ ಹೆಚ್ಚಾಗಿ ಅಲ್ಲಿ ಸಾಂಪ್ರದಾಯಿಕ ಬೇಧಭಾವವಿರಬಹುದು ಎಂದು ಹೇಳಿಕೆ ನೀಡಿದ್ದಾರೆ.

ಅಲ್ಲದೇ, ತಾನು ಮುಸ್ಲಿಂ ಎಂಬ ಕಾರಣಕ್ಕೆ, ಅಥವಾ ತಮಿಳಿಗ ಎಂಬ ಕಾರಣಕ್ಕೆ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ. ನನಗೆ ಸಿಕ್ಕ ಅವಕಾಶವನ್ನು ಕಿತ್ತು, ಬೇರೆಯವರಿಗೆ ನೀಡಿದ್ದೂ ಇದೆ. ನನ್ನ ಜಾಗಕ್ಕೆ ಬೇರೆ ಅವರನ್ನು ಕರೆತಂದಿದ್ದೂ ಇದೆ. ಬಹುಷಃ ಅಲ್ಲಿ ಮತಾಂಗೀಯ ಬೇಧಭಾವವಿರಬಹುದು. ಹಾಗಾಗಿ ನನಗೆ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ಅವಕಾಶ ಸಿಗಲಿಲ್ಲ ಎಂದು ಸಂದರ್ಶನದಲ್ಲಿ ರೆಹಮಾನ್ ಹೇಳಿಕೆ ನೀಡಿದ್ದಾರೆ.

ಹಿಂದಿ ಚಿತ್ರರಂಗವನ್ನು ಸಾಂಪ್ರದಾಯಿಕ ಎಂದು ಹೇಳಿರುವ ರೆಹಮಾನ್, ನನಗೆ ಅವಕಾಶ ಸಿಗದಿರುವುದಕ್ಕೆ ಕಾರಣ ಕಮ್ಯೂನಲ್ ಯೋಚನೆ ಇರಬಹುದು. ಈ ಮುಂಚೆ ನಾನು ಬಾಲಿವುಡ್‌ನಲ್ಲಿ ಕೆಲಸ ಮಾಡುವಾಗ, ನನಗೆ ಇದರ ಪರಿವೇ ಇರಲಿಲ್ಲ. ಬೇಧ ಭಾವ ಕಾಣಲಿಲ್ಲ. ಆದರೆ ಕಳೆದ 8 ವರ್ಷಗಳಿಂದ ಈ ಭೇಧ ಭಾವ ಅರಿವಾಗುತ್ತಿದೆ ಎಂದಿದ್ದಾರೆ.

ಬಾಲಿವುಡ್‌ನಲ್ಲಿ ಇಂದಿಗೂ ಪ್ರಸಿದ್ಧವಾಗಿರುವ ಚಯ್ಯಾ ಚಯ್ಯಾ, ತಾಲ್‌ ಸೇ ತಾಲ ಮಿಲಾ, ಜೈ ಹೋ ಸೇರಿ ಹಲವು ಹಾಡುಗಳನ್ನು ರೆಹಮಾನ್ ಹಿಂದಿ ಚಿತ್ರರಂಗಕ್ಕೆ ನೀಡಿದ್ದಾರೆ.

About The Author