ಮಕ್ಕಳು ಹೋಂವರ್ಕ್ ಮಾತ್ರವಲ್ಲ, ಹಾರ್ಡ್‌ವರ್ಕ್ ಕೂಡ ಮಾಡಬೇಕು: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Political News: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿಯ ಜೆಟ್ ಸಿಬಿಎಸ್‌ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಥೇನ್ ಸಿಂಗ್ ಬಾಲ್ಯದಲ್ಲೇ ಕಂಡ ಹಿಮಾಲಯ ಏರುವ ಕನಸನ್ನು ಪರಿಶ್ರಮದ ಮೂಲಕ ನನಸಾಗಿಸಿಕೊಂಡ ಉದಾಹರಣೆ ನೀಡಿ, ಮಕ್ಕಳು ತಮ್ಮ ಕನಸುಗಳಿಗೆ ಶ್ರಮವೇ ದಾರಿ ಎಂದು ತಿಳಿಸಿದೆನು. ಜೆಟ್ ಎಂದರೆ ವೇಗ. ಅದೇ ರೀತಿ ಜೆಟ್ ಶಾಲೆಯ ಮಕ್ಕಳು ವಿಭಿನ್ನ ಬೆಳವಣಿಗೆ ಸಾಧಿಸಬೇಕು ಎಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

ಮಕ್ಕಳ ಸಂತೆಯಲ್ಲಿ ಸುಮಾರು ₹1 ಲಕ್ಷ ಮೌಲ್ಯದ ವಸ್ತುಗಳ ಮಾರಾಟ ನಡೆಯಿತು. 500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ವ್ಯವಹಾರಿಕ ಜ್ಞಾನ ಪಡೆದರು. ಎರಡು ದಿನಗಳ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ, ಕ್ರೀಡೆ ಹಾಗೂ ವಿಷಯಾಧಾರಿತ ಪ್ರದರ್ಶನಗಳು ನಡೆದವು.

ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ, ಕಾರ್ಯದರ್ಶಿ ಶ್ರೀಮತಿ ಎನ್. ಗಿರಿಜಾ, ಮಾಜಿ ಕಾರ್ಯದರ್ಶಿ ಬಿ.ಎಸ್. ಮಲ್ಲಿಕಾರ್ಜುನ, ಪ್ರಾಂಶುಪಾಲ ಷಣ್ಮುಗ ಸುಂದರಂ ಹಾಗೂ ಶಶಿಕಲಾ ರವಿಶಂಕರ ಉಪಸ್ಥಿತರಿದ್ದರು.

About The Author