Big Boss Kannada: ಬಿಗ್ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ತಂಗಿ ಅಕ್ಷತಾ ಶೆಟ್ಟಿ ಮಾಧ್ಯಮದ ಜತೆ ಮಾತನಾಡಿದ್ದು, ತನ್ನ ಅಕ್ಕ ಯಾವ ರೀತಿ ಇದ್ದವಳು ಅಂತಾ ಹೇಳಿದ್ದಾರೆ.
ರಕ್ಷಿತಾ ತುಂಬಾ ರಿಚ್, ಆಕೆಯ ಬಳಿ ತುಂಬಾ ಹಣ ಇದೆ ಎಂದು ಹಲವರು ಗಾಸಿಪ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಅಕ್ಷತಾ, ನಾವು ಹೇಳುವಷ್ಟು ರಿಚ್ ಅಲ್ಲ. ಆದರೆ ಅಕ್ಕ ಮನೆಯಲಲಿ ಹಣ ಕೇಳುತ್ತಿರಲಿಲ್ಲ. ಆಕೆ 10ನೇ ಕ್ಲಾಸಿನಲ್ಲೇ ಪಾರ್ಟ್ ಟೈಂ ಕೆಲಸಕ್ಕೆ ಹೋಗಿ, ಹಣ ಗಳಿಸುತ್ತಿದ್ದಳು. ತನ್ನ ಫೀಸ್, ಖರ್ಚು ಎಲ್ಲವೂ ತಾನೇ ನೋಡಿಕ“ಳ್ಳುತ್ತಿದ್ದಳು. ಅಪ್ಪ ಅಮ್ಮನ ಬಳಿ ಹಣಕ್ಕಾಗಿ ಎಂದಿಗೂ ಆಕೆ ಪೀಡಿಸಲಿಲ್ಲ.
ಅಲ್ಲದೇ ಯೂಟ್ಯೂಬ್ ಶುರು ಮಾಡಿದಳು. ಆಗ ಆಕೆಗೆ ಯಾರೂ ಬೆಂಬಲಿಸಲಿಲ್ಲ. ಆದರೆ ತಾನು ಯೂಟ್ಯೂಬ್ ಮಾಡಲೇಬೇಕು ಎಂದು ಆಕೆ ಮುಂದುವರಿದಳು, ಬಳಿಕ ಆಕೆಯ ಯೂಟ್ಯೂಬ್ ಕೂಡ ಉತ್ತಮವಾಯಿತು. ಅವಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅಕ್ಷತಾ ಹೇಳಿದ್ದಾರೆ.
ಇನ್ನು ಗಿಲ್ಲಿ ಅಂದ್ರೆ ರಕ್ಷಿತಾ ಇಷ್ಟ. ಮದುವೆಯಾಗ್ತಾರೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅಕ್ಷತಾ, ಹಾಗೇನಿಲ್ಲ ಅವರು ಬರೀ ಸ್ನೇಹಿತರು. ರಾಜ್ಯದ ಜನ ಇಷ್ಟು ಪ್ರೀತಿ ನೀಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.




