ಹಿಂದಿನ ಕಾಲದಲ್ಲಿ ಪತಿಯ ಊಟವಾದ ಬಳಿಕವೇ ಪತ್ನಿ ಊಟ ಮಾಡುತ್ತಿದ್ದರಂತೆ.. ಕಾರಣವೇನು..?

Life Lesson: ಹಿಂದಿನ ಕಾಲದಲ್ಲಿ ಪತಿಯ ಮತ್ತು ಮಕ್ಕಳ ಊಟವಾದ ಬಳಿಕವೇ ಪತ್ನಿ ಊಟ ಮಾಡುತ್ತಿದ್ದಳು. ಕೆಲವರು ಇದನ್ನು ಪತಿ ಉಂಡ ತಟ್ಟೆಯಲ್ಲಿ ಪತ್ನಿ ಉಂಡರೆ, ಆಕೆಯ ಪತಿಯ ಆಯಸ್ಸು ಹೆಚ್ಚುತ್ತದೆ ಎಂದು ಹೇಳುತ್ತಿದ್ದರು. ಆದರೆ ಇದರ ಹಿಂದೆ ಬೇರೆಯದ್ದೇ ಕಾರಣವಿದೆ. ಅದೇನು ಅಂತಾ ತಿಳಿಯೋಣ ಬನ್ನಿ.

ಮುಂಚೆ ಎಲ್ಲ ಮನೆಯ ಜವಾಬ್ದಾರಿ ಪತ್ನಿಯ ಮೇಲೆ ಇರುತ್ತಿತ್ತು. ಪತಿ ದುಡಿದು ತಂದ ಹಣವನ್ನು ಪತ್ನಿಗೆ ನೀಡುತ್ತಿದ್ದ. ಆಕೆ ಮನೆಯಲ್ಲಿ ಆಹಾರವನ್ನು ಬೇಯಿಸಿ ಬಡಿಸುತ್ತಿದ್ದಳು. ಪತಿ-ಮಕ್ಕಳು ಆಹಾರ ಸೇವಿಸಿದ ಬಳಿಕ ತಾನು ಆಹಾರ ಸೇವಿಸುತ್ತಿದ್ದಳು.

ಇದಕ್ಕೆ ಕಾರಣವೇನು ಎಂದರೆ, ಮುಂಚೆ ಎಲ್ಲ ಜನ ಕೃಷಿ ಮಾಡುತ್ತಿದ್ದರು. ಹಾಗೆ ಕಷ್ಟದ ಕೆಲಸ ಮಾಡುತ್ತಿದ್ದವರಿಗೆ ಶಕ್ತಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ದುಡಿದು ಬಂದ ಪತಿಗೆ ಪ್ರಥಮವಾಗಿ ಆಹಾರ ಬಡಿಸಲಾಗುತ್ತಿತ್ತು. ಹಸಿದ ಮಕ್ಕಳಿಗೂ, ಹಿರಿಯರಿಗೂ ಅಪ್ಪನ ಜತೆಗೆ ಊಟ. ಬಳಿಕ ಅಮ್ಮ ಊಟ ಮಾಡುತ್ತಿದ್ದಳು.

ಆದರೆ ಹಾಗೆ ಇದ್ದ ಜವಾಬ್ದಾರಿಯ ಕೆಲಸವನ್ನು ಕೆಲವರು ಇಂದಿಗೂ ಮುಂದುವರಿಸಿದ್ದಾರೆ. ಆಫೀಸಿನಿಂದ ಬಂದ ಗಂಡನಿಗೆ ಮುಂಚೆ ಊಟ, ಬಳಿಕ ಅಮ್ಮನಿಗೆ ಊಟ. ಆದನೆ ಇನ್ನು ಕೆಲವರು ಮನೆಯವರೆಲ್ಲರೂ ಸೇರಿ ಆಹಾರ ಸೇವಿಸುತ್ತಾರೆ. ಅಲ್ಲಿ ಮಹಿಳೆ-ಪುರುಷ ಎಂಬ ಬೇಧ ಭಾವವಿಲ್ಲ.

About The Author