Web Story: ಪರೀಕ್ಷೆ ಅಂದ್ರೆ ಸಾಕು ಕೆಲ ಮಕ್ಕಳಿಗೆ ಸಂತಸ, ಇನ್ನು ಕೆಲ ಮಕ್ಕಳಿಗೆ ಹೆದರಿಕೆ. ಸಂತಸ ಏಕೆ ಎಂದರೆ, ಅಂಥ ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಉಳ್ಳವರು. ತಾನು ಈ ಬಾರಿ ಚೆನ್ನಾಗಿ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸಲೇಬೇಕು ಎನ್ನುವಂಥವರು. ಹೆದರಿಕೆ ಉಳ್ಳವರು, ತಾನು ಓದಿದ್ದು ಸಾಕೋ ಇಲ್ಲವೋ, ಪರೀಕ್ಷೆಯಲ್ಲಿ ತಿಳಿಯದ ವಿಷಯಗಳ ಬಗ್ಗೆ ಬಂದರೆ ಏನು ಮಾಡೋದು..? ಇಂಥ ಯೋಚನೆ ಉಳ್ಳವರು. ಇನ್ನು ಓದದೇ ಇದ್ದವರಿಗೆ ಈ ಎರಡೂ ವಿಚಾರಗಳಿಂದ ಏನೂ ವ್ಯತ್ಯಾಸವಾಗುವುದಿಲ್ಲ.
ಇನ್ನು ಕೆಲವರು ಮಕ್ಕಳಿಗೆ ಪರೀಕ್ಷೆ ಸಮಯದಲ್ಲಿ ಎಗ್ ತಿನ್ನಲು ಬಿಡುವುದಿಲ್ಲ. ಹಾಗಾದ್ರೆ ಏಕೆ ಮಕ್ಕಳಿಗೆ ಪರೀಕ್ಷೆ ಸಮಯದಲ್ಲಿ ಎಗ್ ನೀಡುವುದಿಲ್ಲ. ಇದರ ಹಿಂದಿರುವ ಸತ್ಯವೇನು ಅಂತಾ ತಿಳಿಯೋಣ ಬನ್ನಿ.
ಆಯುರ್ವೇದದ ಪ್ರಕಾರ ತತ್ತಿಯನ್ನು ತಾಮಸಿಕ ಆಹಾರ ಅಂತಾ ಹೇಳಲಾಗುತ್ತದೆ. ಇದನ್ನು ತಿಂದು ಜೀರ್ಣಿಸಿಕ“ಳ್ಳಲು ತುಂಬಾ ಶಕ್ತಿ ಬೇಕಾಗುತ್ತದೆ. ಹಾಗಾಗಿ ಪರೀಕ್ಷೆ ಸಮಯದಲ್ಲಿ ನಾವು ಓದಿದ್ದು ನಮ್ಮ ನೆನಪಿನಲ್ಲಿ ಇರುವ ಬದಲು, ನಮ್ಮ ಗಮನವೆಲ್ಲ ಉದರದ ಕಡೆಗೆ ಹೋಗುತ್ತದೆಯಂತೆ. ಏಕೆಂದರೆ,ತತ್ತಿ ಸೇವನೆ ಮಾಡಿ ನಮ್ಮ ಜೀರ್ಣಕ್ರಿಯೆಯಲ್ಲಿ ಏರುಪೇರಾಗಿರುತ್ತದೆ.
ಹಾಗಾಗಿ ಪರೀಕ್ಷಾ ಸಮಯದಲ್ಲಿ ಬರೀ ಎಗ್ ಮಾತ್ರವಲ್ಲ ಬದಲಾಗಿ ಜೀರ್ಣಿಸಲು ಹೆಚ್ಚು ಸಮಯ ತೆಗೆದುಕ“ಳ್ಳುವ ಆಹಾರ ಸೇವನೆ ಮಾಡಬಾರದು ಅಂತಲೇ ಹೇಳುತ್ತಾರೆ. ದ್ರವಾಹಾರ ಮತ್ತು ಲೈಟ್ ಆಗಿರುವ ಆಹಾರವನ್ನೇ ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಪರೀಕ್ಷೆ ಸಮಯದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಆದರೆ ಹಿಂದಿನ ಕಾಲದಲ್ಲಿ ಇದನ್ನೆಲ್ಲ ತಿಳಿಸಿದರೂ ತಿಳಿಯದ ವಯಸ್ಸಿನವರಿಗೆ ಪರೀಕ್ಷೆ ಸಮಯದಲ್ಲಿ ನಾವು ನಾನ್‌ವೆಜ್ ತಿನ್ನದೇ ವೃತ ಮಾಡಬೇಕು. ಹಾಗಾಗಿ ಎಗ್ ಮತ್ತು ಬೇರೆ ಮಾಂಸಾಹಾರ ಸೇವನೆ ಮಾಡಬಾರದು ಎಂದು ಹೇಳಲಾಗುತ್ತಿತ್ತು.




