Political News: ಇಂದು ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಮಾಧ್ಯಮದ ಜತೆ ಮಾತನಾಡಿದ್ದು, ಕೇಂದ್ರ ಸರ್ಕಾರದವರು ಮನರೇಗಾ ಯೋಜನೆ ಹೆಸರು ಬದಲಾವಣೆಗೆ ನಿರ್ಧರಿಸಿದ್ದಾರೆ. ಇದು 1 ದುರಂತ. ಏನಾದ್ರೂ ಹೆಚ್ಚು ಕಮ್ಮಿ ಆದರೆ ಹಲವರು ಅದರಲ್ಲಿ ಕೆಲಸ ಕಳೆದುಕ“ಳ್ಳುತ್ತಾರೆ. ಈ ಬಗ್ಗೆ ಚರ್ಚೆಯಾಗುತ್ತಿರುವುದು ಉತ್ತಮ ವಿಷಯ ಅಂತಾ ಮಧು ಬಂಗಾರಪ್ಪ ಹೇಳಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಭಾಷಣದ ಬಗ್ಗೆ ವ್ಯಂಗ್ಯವಾಡಿದ್ದ ವಿಜಯೇಂದ್ರಗೆ ಟಾಂಗ್ ನೀಡಿರುವ ಮಧು ಬಂಗಾರಪ್ಪ, ಬಿಜೆಪಿಗರೇ ಕಳೆದ 2ವರೆ ವರ್ಷದಿಂದ ಬುರುಡೆ ಬಿಡುತ್ತಿದ್ದಾರೆ. ಅವರು ಸಿಎಂ ಭಾಷಣದ ಬಗ್ಗೆ ಮಾತನಾಡುವುದು ಬೇಡ. ನಮ್ಮ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿದವರೇ ಇಂದು ಉತ್ತಮ ಮಾತುಗಳನ್ನಾಡುತ್ತಿದ್ದಾರೆ.
ಮನರೇಗಾ ಯೋಜನೆ ಮೂಲಕ ಹಲವರಿಗೆ ಕೆಲಸ ಸಿಗುವ ಹಾಗೆ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಬರೀ ಭಾಷಣ ಮಾಡಿಯೇ ಬುರುಡೆ ಬಿಟ್ಟಿದ್ದು ಬಿಜೆಪಿ ಸರ್ಕಾರ. ಉದ್ಯೋಗ ಖಾತ್ರಿ ಯೋಜನೆ ತೆಗೆದರೆ ಜನರಿಗೆ ಜೀವನ ನಡೆಸಲು ಕಷ್ಟವಾಗುತ್ತದೆ. ಕಾನ್ಫಿಡೆನ್ಸ್ ಹೋಗತ್ತೆ. ಹಾಗಾಗಿ ಮನರೇಗಾ ಯೋಜನೆಯನ್ನು ನಾನು ಕಾಪಾಡಬೇಕು. ಮನರೇಗಾ ಹೆಸರು ಬದಲಾಯಿಸಲು ನಿಂತಿರುವ ಬಿಜೆಪಿಗರೇ, ಗಾಂಧೀಜಿಯವರನ್ನು ಪ್ರತಿದಿನ ಹತ್ಯೆ ಮಾಡುತ್ತಿದ್ದಾರೆಂದು ಮಧು ಬಂಗಾರಪ್ಪ ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.




