ಮನರೇಗಾ ಯೋಜನೆಗೆ ನಾವು ರಾಮನ ಹೆಸರು ಇಡಲಿಲ್ಲ, ಅದೇ ಉದ್ಭವವಾಗಿದೆ: ಛಲವಾದಿ ನಾರಾಯಣಸ್ವಾಮಿ

Political News: ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ಬಿಜೆಪಿ ನಿರ್ಧಾರದ ಬಗ್ಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಪ್ರಿಯಾಂಕ್ ಖರ್ಗೆ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಮನರೇಗಾ ಯೋಜನೆ ಹೆಸರು ಬದಲಾಯಿಸಲು ನಿರ್ಧರಿಸಿದ್ದು ಹೌದು. ಆದರೆ ಅದಕ್ಕೆ ರಾಮನ ಹೆಸರನ್ನು ಇರಿಸಿಲ್ಲ ಎಂದು ಪ್ರಿಯಾಂಕ್‌ಗೆ ಟಾಂಗ್ ನೀಡಿದ್ದಾರೆ.

ಅಲ್ಲದೇ ನಾಳೆಯಿಂದ ನಡೆಯಲಿರುವ ಸದನದಲ್ಲಿ ವಿಶೇಷವಾಗಿ ಮನರೇಗಾ ಯೋಜನೆ ಹೆಸರು ಬದಲಾವಣೆ ನಿರ್ಧಾರದ ಬಗ್ಗೆ ಚರ್ಚೆ ಮಾಡ್ತೀವಿ ಅಂತ ಹೇಳಿದ್ದಾರೆ. ನಮ್ಮದು ಜನರಿಗೆ ಅನುಕೂಲವಾಗುವಂಥ ರೀತಿಯಲ್ಲಿ ಈ ಸ್ಕೀಮ್ ಇರಬೇಕು. ಇದು ಸ್ಕೀಮ್ ಆಗಿಯೇ ಇರಬೇಕು ವಿನಃ ಸ್ಕ್ಯಾಮ್ ಆಗಬಾರದು ಅನ್ನೋದು ನಮ್ಮ ಉದ್ದೇಶ.

ಆದರೆ ಇದುವರೆದು ಇದು ಸ್ಕೀಮ್ ಅಲ್ಲ ಸ್ಕ್ಯಾಮ್ ಆಗಿತ್ತು. ಖುದ್ದು ಕಾಂಗ್ರೆಸ್ ಸರ್ಕಾರವೇ ಇದರ ಹೆಸರನ್ನು 2ರಿಂದ 3 ಬಾರಿ ಬದಲಾಯಿಸಿತ್ತು. ಜತೆಗೆ ಮಹಾತ್ಮಾ ಗಾಂಧಿಯವರ ಹೆಸರು ಇರಿಸಿಯೇ ಲೂಟಿ ಮಾಡ್ತಾ ಇತ್ತು. ಹಾಗಾಗಿ ಗಾಂಧಿ ಹೆಸರಿನಲ್ಲಿ ಲೂಟಿಯಾಗಬಾರದು. ಅವರಿಗೆ ಅಪಚಾರವಾಗಬಾರದು. ಕಳಂಕ ಬರಬಾರದು ಅನ್ನೋ ಕಾರಣಕ್ಕೆ ನಾವು ಅದರ ಹೆಸರನ್ನು ತೆಗೆದಿದ್ದೇವೆ. ಸ್ಕೀಮ್ ತೆಗೆದಿಲ್ಲ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಅಲ್ಲದೇ ನಾವು ಇಂದು ಆ ಯೋಜನೆಗೆ ರೋಜಗಾರ್ ಅಜಿವಿಕ್ ಮಿಷನ್ ಎಂದು ಮರುನಾಮಕರಣ ಮಾಡಿದ್ದೇವೆ ವಿನಃ ರಾಮನ ಹೆಸರು ಇಡಲಿಲ್ಲ ನಾವು. ಆದರೆ ನೀವು ಅಕ್ಷರ ಜೋಡಿಸಿದಾಗ ಹೇಗೆ ಮನರೇಗಾ ಅಂತಾ ಬರ್ತಿತ್ತೋ, ಅದೇ ರೀತಿ ನಮ್ಮ ಸ್ಕೀಮ್ ಹೆಸರು ಜೋಡಿಸಿದಾಗ, ರಾಮನ ಹೆಸರು ಉದ್ಭವವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

About The Author