Mangaluru News: ಮಂಗಳೂರಿಗೆ ಪ್ರವಾಸಿಗರು ಬಂದಾಗ, ದೇವಸ್ಥಾನ, ಸಮುದ್ರಗಳನ್ನು ಬಿಟ್ಟು ನೋಡಬಹುದಾದ ಬೇರೆ ಪ್ರವಾಸಿ ತಾಣ ಅಂದ್ರೆ, ಅದು ಪಿಲಿಕುಳ. ಇಲ್ಲಿ ಹಲವು ಪ್ರಾಣಿ -ಪಕ್ಷಿಗಳನ್ನು ಸಾಕಿ, ಚೆಂದದ ಪಾರ್ಕ್ ಮಾಡಲಾಗಿದೆ. ಇಲ್ಲಿ ಬೇರೆ ಬೇರೆ ಆ್ಯಕ್ಟಿವಿಟೀಸ್ ಕೂಡ ಮಾಡಲಾಗತ್ತೆ. ಆದರೆ ಇದೀಗ ಈ ಪ್ರಾಣಿ ಸಂಗ್ರಹಾಲಯಕ್ಕೆ ಸಂಕಷ್ಟ ಎದುರಾಗಿದ್ದು, ಇಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಸರಿಯಾಗಿ ನೋಡಿಕ“ಳ್ಳುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ಹೈಕೋರ್ಟ್ ಪ್ರಾಣಿ-ಪಕ್ಷಿಗಳನ್ನು ಸರಿಯಾಗಿ ನೋಡಿಕ“ಳ್ಳಲು ಆಗದಿದ್ದಲ್ಲಿ, ಮೃಗಾಲಯವನ್ನೇ ಮುಚ್ಚಿಬಿಡಿ ಎಂದು ಆದೇಶ ನೀಡಿದೆ.
ಈ ಪಿಲಿಕುಳ ಎಂಬ ಜಾಗದಲ್ಲಿ ಮುಂಚೆ ಹುಲಿಗಳು ಬಂದು ಇಲ್ಲಿನ ಕೆರೆಯ ನೀರು ಕುಡಿಯುತ್ತಿತ್ತು. ಪಿಲಿ ಎಂದರೆ ಹುಲಿ, ಕುಳ ಎಂದರೆ ಕೆರೆ. ಹೀಗೆ ಹುಲಿ ನೀರು ಕುಡಿಯುತ್ತಿದ್ದ ಕೆರೆಗೆ ಪಿಲಿಕುಳ ಎಂದು ಹೆಸರಿಸಲಾಗಿದೆ.
ಇಂಥ ಚೆಂದದ ಸ್ಥಳದ ಅವಸ್ಥೆ ಕಂಡು ಸ್ವತಃ ಹೈಕೋರ್ಟ್ ದಂಗಾಗಿದೆ. ಇದಕ್ಕೆ ಕಾರಣವೇನು ಅಂದ್ರೆ, ಇಲ್ಲಿನ ಸಿಬ್ಬಂದಿಗಳು, ಪ್ರಾಣಿ-ಪಕ್ಷಿಗಳ ಕಾಳಜಿ ಮಾಡುತ್ತಿಲ್ಲ. ಪಶುಗಳಿಗೆ ಕಲುಶಿತವಾಗಿರುವ ನೀರನ್ನಿರಿಸುತ್ತಾರೆ. ಸರಿಯಾಗಿ ಆಹಾರ ನೀಡುತ್ತಿಲ್ಲ. ತುಕ್ಕು ಹಿಡಿದ ಪಂಜರವನ್ನು ಬಳಸುತ್ತಾರೆ. ಅಶುಚಿಯಾದ ವಾತಾವರಣವಿರಿಸಿದ್ದಾರೆಂದು ಆರೋಪಿಸಲಾಗಿದೆ.
ಇನ್ನು ಈ ಬಗ್ಗೆ ಮುಂಚೆಯೇ ಆರೋಪಿಸಲಾಗಿತ್ತು. ಅಲ್ಲದೇ, ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ ಕೂಡ ಇಲ್ಲಿನ ಸಿಬ್ಬಂದಿಗಳಾಗಲಿ, ಅರಣ್ಯ ಇಲಾಖೆಯವರಾಗಲಿ ಎಚ್ಚೆತ್ತುಕ“ಳ್ಳದೇ, ನಿರ್ಲಕ್ಷ್ಯ ತೋರಿಸಿದ್ದಾರೆಂಬ ಆರೋಪವಿದೆ. ಇದೀಗ ವನ್ಯಜೀವಿ ಸಂರಕ್ಷಕ ಭುವನ್ ಪ್ರಾಣಿಗಳ ಪರವಾಗಿ, ಕೋರ್ಟ್ ಮೆಟ್ಟಿಲೇರಿದ್ದು, ಪ್ರಾಣಿ ಸಂಗ್ರಹಾಲಯದ ಚಿತ್ರ ಕಂಡು ನ್ಯಾಯಾಧೀಶರೇ ಶಾಕ್ ಆಗಿದ್ದಾರೆ.
ಅಲ್ಲಿನ ಪ್ರಾಣಿಗಳು ಕಲುಶಿತ ನೀರು ಕುಡಿದು ಅನಾರೋಗ್ಯಕ್ಕೀಡಾಗಿದ್ದರೂ, ಮತ್ತೆ ಅದೇ ಕಲುಶಿತ ನೀರನ್ನಿರಿಸಲಾಗಿದೆ. ಅವುಗಳಿಗೆ ಚಿಕಿತ್ಸೆ ನೀಡುವ ಯೋಚನೆಯನ್ನೂ ಮಾಡುತ್ತಿಲ್ಲ. ಹೀಗಾಗಿ ಪ್ರಾಣಿಗಳನ್ನು ಚೆನ್ನಾಗಿ ನೋಡಿಕ“ಳ್ಳಲಾಗದಿದ್ದಲ್ಲಿ, ಪ್ರಾಣಿ ಸಂಗ್ರಹಾಲಯ ಮುಚ್ಚಿಬಿಡಿ ಎಂದು ಕೋರ್ಟ್ ಆದೇಶಿಸಿದೆ. ಮಂಗಳೂರ ಹೆಮ್ಮೆಯಾಗಿರುವ ಪಿಲಿಕುಳ ನಿಸರ್ಗಧಾಮದಲ್ಲಿರುವ ಪ್ರಾಣಿಗಳಿಗೆ ನ್ಯಾಯ ಸಿಗುತ್ತದಾ ಅಥವಾ ಮೃಗಾಲಯವೇ ಬಂದ್ ಆಗುತ್ತದಾ ಅನ್ನೋದನ್ನು ಕಾದು ನೋಡಬೇಕಿದೆ.




