ರೆಸ್ಟೋರೆಂಟ್‌ಗಳಲ್ಲಿ ಸಿಗುವ ಗ್ರೇವಿ ಹಿಂದಿನ ಡಾರ್ಕ್ ಸಿಕ್ರೇಟ್ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ

Web Story: ನೀವು ಕೆಲವು ರೆಸ್ಟೋರೆಂಟ್‌ಗಳಿಗೆ ಹೋಗ್ತೀರಿ. ಅಲ್ಲಿ ನೀವು ಆರ್ಡರ್ ಮಾಡುವ ಎಲ್ಲ ರೀತಿಯ ಗ್ರೇವಿಗಳನ್ನು ಅವರು ಕೆಲವೇ ನಿಮಿಷಗಳಲ್ಲಿ ತಂದು ಇಡುತ್ತಾರೆ. ಅದೇ ರೀತಿ ಅಕ್ಕ ಪಕ್ಕದ ಟೇಬಲ್‌ನವರೂ ಕೂಡ ಹೇಳುವ ತರಹೇವಾರಿ ಗ್ರೇವಿ ಡಿಶ್‌ಗಳನ್ನು ಕೂಡ ಬೇಗ ಬೇಗ ಸರ್ವ್ ಮಾಡುತ್ತಾರೆ. ಆದರೆ ಎಲ್ಲ ರೀತಿಯ ಗ್ರೇವಿಗಳೂ ಸೇಮ್ ಟೇಸ್ಟ್ ಇರುತ್ತದೆ. ಅದರಲ್ಲಿರುವ ತರಕಾರಿ, ಪನೀರ್, ಕಾಜು, ಬೇರೆ ಬೇರೆ ಇರುತ್ತದೆ ಅಷ್ಟೇ. ಈ ಟ್ರಿಕ್ ಹಿಂದಿರುವ ಸತ್ಯ ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ.

ಏಕೆಂದರೆ, ರೆಸ್ಟೋರೆಂಟ್‌ನಲ್ಲೇ ಕೆಲಸ ಮಾಡುವ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ತಿಂಗಳಿಗೂ ಮುಂಚೆ ಗ್ರೇವಿಗಳನ್ನು ರೆಡಿ ಮಾಡಿ, ಅದನ್ನು ಏರ್‌ಟೈಟ್ ಪ್ಲಾಸ್ಟಿಕ್‌ನಲ್ಲಿರಿಸಿ, ಡೀಪ್ ಫ್ರೀಜ್ ಮಾಡುತ್ತಾರೆ.

ಗ್ರಾಹಕರು ಬಂದು ಆರ್ಡರ್ ಮಾಡಿದ್ರೆ ಅದರಲ್ಲೇ ಯಾವುದಾದರೂ ಪ್ಯಾಕೇಟ್ ತೆರೆದು, ಗ್ರೇವಿಯನ್ನು ಮೈಕ್ರೋವೇವ್ ಮಾಡಿ, ಅದಕ್ಕೆ ತರಕಾರಿ ಸೇರಿಸಿ, ತಂದಿಡುತ್ತಾರೆ. ಮತ್ತು ಗ್ರಾಹಕರು ಇದು ಫ್ರೆಶ್ ಆಹಾರವೆಂಬ ಭ್ರಮೆಯಲ್ಲಿ ಅದನ್ನು ಸೇವಿಸಿ, ಹೋಗುತ್ತಾರೆ.

ಫ್ರಿಜ್‌ನಲ್ಲಿರಿಸಿದ ಆಹಾರ ಹಾಳಾಗೋದಿಲ್ಲ ಅನ್ನೋದು ಎಷ್ಟು ಸತ್ಯವೋ, ಆ ಆಹಾರಗಳು ಆರೋಗ್ಯಕರವಂತೂ ಅಲ್ಲವೇ ಅಲ್ಲ ಅನ್ನೋದು ಕೂಡ ಅಷ್ಟೇ ಸತ್ಯ.

About The Author