SSLC ಪೂರ್ವ ಪರೀಕ್ಷೆ ಕೇಂದ್ರಗಳಿಗೆ CEO ದಿಢೀರ್ ಭೇಟಿ

SSLC ಪೂರ್ವಸಿದ್ದತಾ ಪರೀಕ್ಷೆ ಪರಿಶೀಲಿಸಿದ ಜಿ.ಪಂ. ಸಿಇಓ
ಜನವರಿ 27 ರಿಂದ ಪ್ರಾರಂಭವಾಗಿರುವ SSLC ಪೂರ್ವ ಸಿದ್ದತಾ ಪರೀಕ್ಷೆ ಹಿನ್ನೆಲೆಯಲ್ಲಿ ಮಂಡ್ಯ ತಾಲ್ಲೂಕಿನ ಸೂನಗನಹಳ್ಳಿ ಮತ್ತು ತಗ್ಗಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ. ಸಿಇಓ ನಂದಿನಿ KR ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲೆಗೆ ಭೇಟಿ ನೀಡಿದ ಸಿಇಓ ಅವರು ಕಳೆದ ಮಾಹೆ ನಡೆದ ಮೊದಲನೇ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣಗಳೇನು ಎಂಬ ಬಗ್ಗೆ ಶಾಲೆಯ ಮುಖ್ಯೋಪಧ್ಯಾಯರಿಂದ ಮಾಹಿತಿ ಪಡೆದರು. ಮುಖ್ಯ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪೋಷಕರಿಗೂ ಸಹ ಸೂಕ್ತ ಮಾಹಿತಿ ನೀಡಿ ಮಕ್ಕಳಿಗೆ ಮನೆಯಲ್ಲಿಯೂ ಕಲಿಕಾ ವಾತಾವರಣ ನಿರ್ಮಾಣ ಮಾಡುವಂತೆ ತಿಳಿಸಲು ಶಿಕ್ಷಕರಿಗೆ ಸೂಚಿಸಿದರು.

ಕಲಿಕಾ ಮಿತ್ರ ಪರೀಕ್ಷಾ ಮಾರ್ಗದರ್ಶಿ ನೀಡಿದ ನಂತರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸ್ವಲ್ಪ ಅನುಕೂಲವಾಗಿದೆ ಹಾಗೂ ಸಿ.ಎಸ್.ಆರ್. ಅನುದಾನದಡಿ ನೀಡಲಾಗಿರುವ ನೋಟ್ ಬುಕ್ ಗಳನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ ಹೆಚ್ಚಿನ ಅಭ್ಯಾಸ ಮಾಡಿಸಲು ಸಹಾಯಕವಾಗಿದೆ ಎಂದು ಶಿಕ್ಷಕರು ಮಾಹಿತಿ ನೀಡಿದರು.

ಕಳೆದ ಮಾಹೆಯಿಂದ ಭಾನುವಾರವೂ ಸಹ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಹಾಜರಾಗುತ್ತಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಗೈರುಹಾಜರಾಗುತ್ತಿದ್ದು, ಸದರಿ ವಿದ್ಯಾರ್ಥಿಗಳ ಪೋಷಕರಿಗೂ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು. ಕೆಲವು ಬಾಲಕರು ಶಾಲೆಗೆ ಗೈರು ಹಾಜರಾಗುತ್ತಿದ್ದು, ಬಾಲಕರಿಂದಲೇ ಫಲಿತಾಂಶ ಕುಂಠಿತವಾಗುತ್ತಿದೆ ಎಂದು ತಿಳಿಸಿದರು.

About The Author