ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಜಗಳಿಸಿದ್ದಾರೆ. ಮೇಟಿ ಗೆಲುವಿನ ಬಗ್ಗೆ ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ್, ರಿಯಾಕ್ಟ್ ಮಾಡಿದ್ದಾರೆ, ಮಾಧ್ಯಮಗಳೊಂದಿಗೆ ಮಾತನಾಡಿದ ತಿಮ್ಮಾಪುರ್, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲ ಮತದಾರರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ.
ಮಾಜಿ ಸಚಿವರು, ಮಾಜಿ ಶಾಸಕರು ನಿರಂತರವಾಗಿ ಪ್ರಚಾರ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದರು. ಬಿಜೆಪಿಯು ಹಿಂದುತ್ವದ ಟ್ರಂಪ್ ಕಾರ್ಡ್ ಬಳಸಿ, ಯತ್ನಾಳ್ರನ್ನ ಕರೆತಂದಿದ್ದರು ಎಂಬ ಪ್ರಶ್ನಗೆ ಉತ್ತರಿಸಿದ ಅವರು, ಪದೇ ಪದೇ ಹಿಂದುತ್ವ, ಹಿಂದೂ ಎಂದು ಭಾಷಣ ಮಾಡುತ್ತಿದ್ದರು.
ನಾವು, ಹಾಗೂ ಉಮೇಶ್ ಮೇಟಿ ಹಿಂದೂಗಳಲ್ಲವಾ? ನಾವು ಕೂಡ ಪ್ರಚಾರ ಮಾಡಿದ್ದೇವು. ಎಲ್ಲರ ಶ್ರಮದಿಂದ ಕಾಂಗ್ರೆಸ್ ಗೆದ್ದಿದೆ. ನಮ್ಮ ಸರಕಾರದ ಅಭಿವೃದ್ಧಿ ಕಾರ್ಯ ಗ್ಯಾರಂಟಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಿಜೆಪಿಯವರನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂಬುದಕ್ಕೆ ಈ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ತಿಳಿಸಿದರು.




