ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿಜೆ ರಾಯ್ ಯಾವುದೇ ವ್ಯವಹಾರ ಮಾಡಿದರೂ ಅದನ್ನು ಹೆಚ್ಚಿನ ವಿವರಗಳೊಂದಿಗೆ ಕೈಯಲ್ಲಿ ಬರೆದುಕೊಳ್ಳುತ್ತಿದ್ದರು ಎಂಬುದು ಹೊಸ ಬೆಳವಣಿಗೆಯಾಗಿರುವುದು ಗಮನ ಸೆಳೆದಿದೆ.
ಸಾಂದರ್ಭಿಕ ತನಿಖೆ (SIT) ತಂಡವು ರಿಚ್ಮಂಡ್ ಸರ್ಕಲ್‌ನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಅಪಾರ ಪ್ರಮಾಣದ ದಾಖಲೆಯನ್ನು ವಶಕ್ಕೆ ಪಡೆದಿದ್ದು, ವಿವರವಾದ ಪರಿಶೀಲನೆ ನಡೆಸುತ್ತಿದೆ.
ತಂದಿರುವ ಮಾಹಿತಿಯಂತೆ, ಸಿಜೆ ರಾಯ್ ಪ್ರತಿದಿನದ ವ್ಯವಹಾರ, ಭೇಟಿಗಳು, ನಿರ್ಧಾರಗಳು, ಮತ್ತು ಪ್ರಯಾಣಗಳ ಎಲ್ಲ ವಿವರಗಳನ್ನು ತನ್ನ ಡೈರಿಯಲ್ಲಿ ದಾಖಲಿಸುತ್ತಿದ್ದರು. ಈ ದಾಖಲೆಗಳು ಈಗ ಎಸ್‌ಐಟಿ ಅಧಿಕಾರಿಗಳ ಪರಿಶೀಲನೆಯಲ್ಲಿವೆ.
ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಸಿಜೆ ರಾಯ್ ಆತ್ಮಹತ್ಯೆ ಸಂಬಂಧಿತ ಯಾವುದೇ ನೋಟ್ ಡೈರಿಯಲ್ಲಿ ಬರೆಯಲಾಗಿಲ್ಲ. ಎಸ್‌ಐಟಿ ಅಧಿಕಾರಿಗಳು ಕೈ ಬರಹದ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಯಾವುದೇ ಅಪರಾಧ ಅಥವಾ ಅನಿಯಮಿತ ವ್ಯವಹಾರ ಸಂಬಂಧವನ್ನು ಹೊರಹಾಕಲು ಚುರುಕುಗೊಂಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ




