Tumakuru News: ತಿಪಟೂರು: ಕಳೆದ ಬಾರಿಗಿಂಥ ಇನ್ನೂ ಅದ್ಧೂರಿಯಾಗಿ ಈ ಬಾರಿ ಕಲ್ಪೋತ್ಸವ ಆಚರಿಸಲಾಗುತ್ತಿದ್ದು ಡಾ. ಶ್ರೀಧರ್ ನೇತೃತ್ವದ ಸಂಸ್ಥೆ ಮತ್ತು ತಂಡ ಹಾಗೂ ಅಧಿಕಾರಿಗಳ ಒಳಗೊಂಡಂತೆ ನಿರ್ವಹಣೆ ಮಾಡುವ ಬಗ್ಗೆ ಯೋಜನೆ ರೂಪಿಸಿದ್ದು ಅಪಪ್ರಚಾರದ ಬಗ್ಗೆ ಕಿವಿಗೊಡಬಾರದೆಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಕಳೆದ ಬಾರಿಯ ಕಲ್ಪೋತ್ಸವ ಅಭೂತಪೂರ್ವ ಯಶಸ್ವಿಯ ಹಿಂದೆ ಅದರ ಮಹತ್ವ ಮತ್ತು ಸಾರ್ವಜನಿಕರ ಸಹಭಾಗಿತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಶಾಸಕ ಕೆ ಷಡಕ್ಷರಿ ಈ ಬಾರಿ ತಾಲ್ಲೂಕು ಆಡಳಿತ ಒಳಗೊಂಡಂತೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮ ಮಾಡುವ ಬಗ್ಗೆ ಆಲೋಚಿಸಿ, ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ಕೆಲವು ದಿನಗಳ ಹಿಂದೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.
ಆದರೆ ಕೆಲವು ಪತ್ರಕರ್ತರು ವಿಷಯವನ್ನು ತಿರುಚಿ ಒಂದೇ ಸುದ್ದಿ ಹಲವು ಪತ್ರಿಕೆಗಳಲ್ಲಿ ಬರುವಂತೆ ಮಾಡಿ, ತಾಲ್ಲೂಕು ಆಡಳಿತ ಮತ್ತು ಕಲ್ಪೋತ್ಸವ ಆಚರಣಾ ಸಮಿತಿ ನಡುವಿನ ಸಾಮರಸ್ಯ ಹಾಳು ಮಾಡುವ ಜೊತೆಗೆ ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದರು.
ಇದು ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ವಿವಾದ ಉಂಟಾಗಿದ್ದು. ಪರಿಸ್ಥಿತಿ ಲಾಭ ಪಡೆಯಲು ಕೆಲವು ಅವಕಾಶವಾದಿಗಳು ಮುಂದಾಗಿದ್ದು ಕಂಡು ಬಂತು. ಈ ಅಪಪ್ರಚಾರದಿಂದ ಮನನೊಂದ ಡಾ. ಶ್ರೀಧರ್ ನೇತೃತ್ವದ ಕಲಾಕೃತಿ ತಂಡ ಶಾಸಕರನ್ನು ನೇರವಾಗಿ ಬೇಟಿ ಮಾಡಿ ಸುಳ್ಳು ಮತ್ತು ಅಪಪ್ರಚಾರದ ಬಗ್ಗೆ ಅವರ ಗಮನಕ್ಕೆ ತರಲಾಗಿ ಹೇಳಿಕೆಯನ್ನು ತಿರುಚಿ, ತಮಗೆ ಇಷ್ಟ ಬಂದಂತೆ ಪದ ಬಳಕೆ ಮಾಡಿ, ವಿವಾದಕ್ಕೆ ಮತ್ತು ಮನಸ್ತಾಪಕ್ಕೆ ಕಾರಣವಾಗಿರುವುದಲ್ಲದೇ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡುವ ಷಡ್ಯಂತ್ರ ನಡೆಸಿದ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಮತ್ತು ಇದಕ್ಕೆ ಕಾರಣವಾಗುವ ಸುದ್ದಿ ಪ್ರಚಾರ ಮಾಡಿದ ಪತ್ರಕರ್ತರ ವಿರುದ್ದವೂ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕರು ಪತ್ರಕರ್ತರ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವಂತಹ ಇಂತಹವರ ವಿರುದ್ಧ ನಾನು ಲಿಖಿತ ಪತ್ರ ನೀಡುವುದಾಗಿ ಮತ್ತು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರ ಗಮನಕ್ಕೆ ತರುವುದಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಇಂತಹ ಪತ್ರಕರ್ತರನ್ನು ಗುರ್ತಿಸಿ, ಸಂಘದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿದರು.
ಇಂತಹ ವಿಚಾರಗಳಿಗೆ ಸಾರ್ವಜನಿಕರು ಗಮನಕೊಡ ಬಾರದು. ಕಳೆದ ಬಾರಿಯಂತೆ ಕಲ್ಪೋತ್ಸವ ಆಚರಣೆಯನ್ನು ಎಲ್ಲರೊಳಗೊಂಡಂತೆ ಸಮಿತಿ ರಚಿಸಿ, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ನಡೆಸಲಾಗುವುದು, ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದ ಅವರು ಸರ್ಕಾರದಿಂದ ಹಣ ಬಿಡುಗಡೆಯಾಗಿದೆ, ಆದರೆ ನಾನು ಆ ಹಣವನ್ನು ಯಾರಿಗೂ ಕೊಟ್ಟಿಲ್ಲ. ಅವರು ಸ್ವಂತ ಹಣದಲ್ಲಿ ಖರ್ಚು ಮಾಡಿದ್ದಾರೆಂಬುದು ನಮಗೆ ಗೊತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದರು.




