Crocs ಎನ್ನುವ ಬ್ರ್ಯಾಂಡೇಡ್ ಚಪ್ಪಲಿಯ ಶೇಪ್-ಲೋಗೋ ಹಿಂದಿನ ರಹಸ್ಯವೇನು..?

Web Story: ಈಗ ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರ ತನಕ ಹಲವರು ಕ್ರಾಕ್ಸ್ ಚಪ್ಪಲಿಯನ್ನೇ ಬಳಸುತ್ತಾರೆ. 2ರಿಂದ 3 ಸಾವಿರ ರೂಪಾಯಿ ಬೆಲೆಬಾಳುವ ಚಪ್ಪಲಿಯ ಡಿಸೈನ್ ಮತ್ತು ಲೋಗೋ ಹಿಂದಿನ ರಹಸ್ಯ ಹಲವು ಜನರಿಗೆ ತಿಳಿದಿಲ್ಲ.

ಕ್ರಾಕ್ಸ್ ಅಂದ್ರೆ ಕ್ರೋಕೋಡಯಲ್ ಶಾರ್ಟ್ ಫಾರ್ಮ್. ಅಲ್ಲದೇ, ಚಪ್ಪಲಿಯ ಶೇಪ್ ಕೂಡ ಮೊಸಳೆಯ ಮುಖದ ಶೇಪ್‌ನಂತೆ ಇದೆ. ಲೋಗೋ ಕೂಡ ಅದೇ ರೀತಿ ಇದೆ. ಅಲ್ಲದೇ ಮೊಸಳೆ ನೀರು ಮತ್ತು ಭೂಮಿ ಎರಡರ ಮೇಲೂ ನಡೆಯುತ್ತದೆ. ಅದೇ ರೀತಿ ಕ್ರಾಕ್ಸ್ ಚಪ್ಪಲಿಯನ್ನು ನೀವು ನೀರಿನಲ್ಲೂ ಬಳಸಬಹುದು, ನೆಲದ ಮೇಲೂ ಬಳಸಬಹುದು.

ಕ್ರಾಸ್‌ಲೈಟ್ ಫೋಮ್ ಎಂಬ ಮೆಟಿರಿಯಲ್‌ನಿಂದ ಈ ಚಪ್ಪಲಿ ರೆಡಿ ಮಾಡಲಾಗುತ್ತದೆ. ಈ ಮೆಟಿರಿಯಲ್ ವಾಟರ್ ಪ್ರೂಫ್ ಆಗಿದ್ದು, ಹೆಚ್ಚು ಬೆಲೆ ಬಾಳುವಂಥದ್ದಾಗಿರುತ್ತದೆ. ಅಲ್ಲದೇ, ನೀವು ಈ ಚಪ್ಪಲಿಯನ್ನು ನೀರಿಗೆ ಹಾಕಿದ್ರೆ, ಇದು ಮುಳುಗುವುದಿಲ್ಲ, ಬದಲಾಗಿ ತೇಲುತ್ತದೆ. ಹಾಗಾಗಿ ಬೋಟಿಂಗ್ ಸೇರಿ, ಬೇರೆ ಬೇರೆ ವಾಟರ್ ಆ್ಯಕ್ಟಿವಿಟೀಸ್ ಮಾಡುವಾಗ ಧರಿಸಲೆಂದೇ ಕ್ರಾಕ್ಸ್ ಲಾಂಚ್ ಮಾಡಲಾಗಿತ್ತು. ಆದರೆ ಜನ ಸಾಮಾನ್ಯರಿಗೂ ಇದು ಇಷ್ಟವಾಾಗಿ ಜನ ಇದನ್ನು ಖರೀದಿಸಲು ಶುರು ಮಾಡಿದರು. ಇದೀಗ ಕ್ರಾಕ್ಸ್ ವರ್ಷಕ್ಕೆ 4 ಬಿಲಿಯನ್ ಹಣ ಸಂಪಾದಿಸುವ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ.

About The Author