Recipe: 1 ಪಾಟ್ ಸೋಯಾ ಪಲಾವ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಸೋಯಾ ಚಂಕ್ಸ್, ಅಕ್ಕಿ, 1 ಕ್ಯಾರೇಟ್, ಬೀನ್ಸ್, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ, ಹೂಕೋಸು, ಬಟಾಣಿ, 1 ಟೋಮೆಟೋ, ಕೊತ್ತೊಂಬರಿ ಸೊಪ್ಪು, ಶುಂಠಿ, 2 ಹಸಿಮೆಣಸು, ಪುದೀನಾ, ತುಪ್ಪ ಅಥವಾ ಎಣ್ಣೆ, ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು, ಜೀರಿಗೆ, ಸೋಂಪು, ಪಲಾವ್ ಎಲೆ, ಕಸೂರಿ ಮೇಥಿ, ಉಪ್ಪು.

ಮಾಡುವ ವಿಧಾನ: ಕುದಿಸಿದ ನೀರಿಗೆ ಸೋಯಾ ಚಂಕ್ಸ್ ಹಾಕಿ, 10 ನಿಮಿಷ ನೆನೆಸಿಡಿ. ಬಳಿಕ ನೀರು ಬಸಿದು, ಬದಿಗಿರಿಸಿ. ಈಗ ಅಕ್ಕಿ ಸ್ವಚ್ಛ ಮಾಡಿ, ವಾಶ್ ಮಾಡಿ. ಕುಕ್ಕರ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿಯಾದ ಬಳಿಕ, ಅದಕ್ಕೆ ಜೀರಿಗೆ, ಸೋಂಪು, ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು, ಪಲಾವ್ ಎಲೆ ಹಾಕಿ ಬಾಡಿಸಿ.

ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ, ಬಳಿಕ ಬೆಳ್ಳುಳ್ಳಿ- ಶುಂಠಿ  ಜಜ್ಜಿ ಮಿಕ್ಸ್ ಮಾಡಿ, ಮಿಕ್ಸಿ ಜಾರ್‌ಗೆ ಟೋಮೆಟೋ, ಕೊತ್ತೊಂಬರಿ ಸೊಪ್ಪು, ಪುದೀನಾ, ಪುದೀನಾ, ಹಾಕಿ ರುಬ್ಬಿ, ಸೇರಿಸಿ. 3 ನಿಮಿಷ ಮಂದ ಉರಿಯಲ್ಲಿ ಬಾಡಿಸಿ, ಬಟಾಣಿ, ಹೂಕೋಸು, ಬೀನ್ಸ್, ಕ್ಯಾಪ್ಸಿಕಂ, ಕ್ಯಾರೇಟ್ ಸೇರಿಸಿ ಹುರಿಯಿರಿ.

ನಂತರ ಅಕ್ಕಿ ಹಾಕಿ ಮಿಕ್ಸ್ ಮಾಡಿ. ಬಳಿಕ ಕಸೂರಿ ಮೇಥಿ, ಉಪ್ಪು, ಬೇಕಾದಲ್ಲಿ ಗರಂ ಮಸಾಲೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ಕುಕ್ಕರ್ ಮುಚ್ಚಳ ಮುಚ್ಚಿ 3 ವಿಶಲ್ ಕೂಗಿಸಿದ್ರೆ, 1 ಪಾಟ್ ಸೋಯಾ ಪಲಾವ್ ರೆಡಿ.

About The Author