Health Tips: ಏನಿದು ಬೊಟೊಕ್ಸ್ ಚಿಕಿತ್ಸೆ? ಸೌಂದರ್ಯ ಹೆಚ್ಚಿಸಿಕೊಳ್ಳಲು ಇದು ಬೇಕೇ?

Health Tips: ಮುಖದ ಸೌಂದರ್ಯ ಹೆಚ್ಚಬೇಕು ಅಂತಾ ಪಡೆಯೋ ಚಿಕಿತ್ಸೆಯಲ್ಲಿ ಬೊಟೊಕ್ಸ್ ಚಿಕಿತ್ಸೆ ಕೂಡ 1. ಹಾಗಾಗಿ ವೈದ್ಯರು ಈ ಚಿಕಿತ್ಸೆ ಪಡಯುವ ರೀತಿ ಬಗ್ಗೆ ವಿವರಿಸಿದ್ದಾರೆ.

ಹಣೆಯ ಮೇಲೆ ಬರುವ ನೆರಿಗೆಗಳನ್ನು ತೆಗೆಯುವ ಚಿಕಿತ್ಸೆಗಳನ್ನು ಬೊಟೊಕ್ಸ್ ಚಿಕಿತ್ಸೆ ಎನ್ನಲಾಗುತ್ತದೆ. ಬೊಟೊಕ್ಸ್ ಚಿಕಿತ್ಸೆ ನೀಡುವಾಗ ನಾವು ಸರಿಯಾದ ಪ್ರಮಾಣದಲ್ಲಿ ನೀಡಿದಾಗ, ಹಣೆಯ ಮೇಲೆ ಅಗತ್ಯವಿರುವಷ್ಟು ಮಾತ್ರ ನೆರಿಗೆ ಬೀಳುತ್ತದೆ. ಅದೇ ಮದ್ದಿನ ಪ್ರಮಾಣ ಹೆಚ್ಚಾದ್ರೆ, ನೆರಗೆಯೇ ಬರುವುದಿಲ್ಲ. ಅದು ಯಾರು ಚಿಕಿತ್ಸೆ ಪಡೆಯುತ್ತಾರೋ, ಅವರ ಆಯ್ಕೆಯಾಗಿರುತ್ತದೆ ಅಂತಾರೆ ವೈದ್ಯರು.

ಈ ಚಿಕಿತ್ಸೆ 1 ಸಲ ಮಾಡಿಸಿದರೆ, 3ರಿಂದ 6 ತಿಂಗಳಿಗೆ ಮತ್ತೆ ನೀವು ಈ ಚಿಕಿತ್ಸೆ ಪಡೆಯಲೇಬೇಕಾಗುತ್ತದೆ. ಇಲ್ಲವಾದಲ್ಲಿ, ಹೆಚ್ಚು ನೆರಿಗೆ ಕಾಣಿಸಲು ಶುರುವಾಗುತ್ತದೆ. ಮುಖದಿಂದ ಕುತ್ತಿಗೆಯವರೆಗೆ ಯಾವುದೇ ಭಾಗದಲ್ಲಾದರೂ ನೀವು ಈ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author