Bollywood: ಧುರಂಧರ್ ಮೂವಿ ಸಕ್ಸಸ್ ಸಂಭ್ರಮದಲ್ಲಿರುವ ಬಾಲಿವುಡ್ ನಟ ರಣ್ವೀರ್ ಸಿಂಗ್ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದೆ.
ರಣ್ವೀರ್ ಸಿಂಗ್, ಅವರ ಮ್ಯಾನೇಜರ್, ಬಾಡಿಗಾರ್ಡ್ ಮತ್ತು ಎಲ್ಲ ಸಿಬ್ಬಂದಿಗಳಿಗೆ ಲಾರೆನ್ಸ್ ಬಿಷ್ಣೋಯ್ ತಂಡ ಎಚ್ಚರಿಕೆ ನೀಡಿ, ಬೆದರಿಕೆ ಹಾಕಿದೆ. ಈ ಮುನ್ನ ಫೆ.10ರಂದು ಬಂದ ಬೆದರಿಕೆಯಲ್ಲಿ 1 ಕೋಟಿ ರೂಪಾಯಿ ನೀಡುವಂತೆ ಆಡಿಯೋ ಸಂದೇಶ ಕಳುಹಿಸಲಾಗಿತ್ತು. ನಿರ್ದೇಶಕ ರೋಹಿತ್ ಶೆಟ್ಟಿಗೂ ಬೆದರಿಕೆ ಹಾಕಿದ್ದು, ನಾವು ಹೇಳಿದಂತೆ ಕೇಳದಿದ್ದಲ್ಲಿ, ಬಾಲಿವುಡ್ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಸದ್ಯ ಮುಂಬೈನ ಬಾಂದ್ರಾದಲ್ಲಿ ವಾಸಿಸುತ್ತಿರುವ ದೀಪಿಕಾ ಮತ್ತು ರಣ್ಬೀರ್ ಮನೆಗೆ ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜಿಸಲಾಗಿದ್ದು, ಪೋಲೀಸ್ ಸ್ಟೇಶನ್ಲ್ಲೂ ಕಂಪ್ಲೇಂಟ್ ನೀಡಲಾಗಿದೆ. ಮುಂಬೈ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.




