ಪವಿತ್ರವಾದ ಭಾಷೆ ನಮ್ಮದು, ಎಲ್ಲೊದ್ರೂ ಜನ ಸಫರ್‌ ಆಗ್ತಾರೆ: Saahil Podcast

Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಹೇಗೆ ಚೈನೀಸ್ ಭಾಷೆ ಕಲಿತಿದ್ದು ಅಂತಾ ವಿವರಿಸಿದ್ದಾರೆ.

1 ಬಾರಿ ಸಾಹಿಲ್ ಮತ್ತು ಅವರ ಚೈನೀಸ್ ಫ್ರೆಂಡ್ಸ್, ಆಚೆಗಡೆ ಹೋಗಿದ್ದಾಗ, ಸಾಹಿಲ್ ಬಾಯಿಯಿಂದ ಚೈನಾ ಭಾಷೆಯ ಉಚ್ಛಾರ ತಪ್ಪಾಯಿತು. ಇದನ್ನೇ ಗೇಲಿ ಮಾಡಿ, ಇವರ ಸ್ನೇಹಿತನೋರ್ವ ನಕ್ಕಿದ್ದನಂತೆ. ತಮಾಷೆಯೂ ಮಾಡಿದ್ದನಂತೆ. ಆಗ ಸಾಹಿಲ್ ಅವರಿಗೆ ತುಂಬಾ ಬೇಸರವಾಗಿತ್ತು. ನಾನು ವಿದೇಶಿಗನಾಗಿ, ನಿನ್ನ ದೇಶಕ್ಕೆ ಬಂದು ನಿನ್ನದೇ ಭಾಷೆ ಕಲಿಯಲು ಪ್ರಯತ್ನಿಸುತ್ತಿರುವಾಗ, ನೀನು ಆ ಪ್ರಯತ್ನವನ್ನು ಪ್ರಶಂಸಿಸುವುದನ್ನು ಬಿಟ್ಟು, ಗೇಲಿ ಮಾಡ್ತೀಯಾ ಅಂತಾ ಸಾಹಿಲ್ ಚಾಲೆಂಜ್ ಮಾಡಿಯೇ ಚೈನೀಸ್ ಭಾಷೆ ಕಲಿತು, ಸಾಧನೆ ಮಾಡಿದ್ದಾರೆ.

ಇನ್ನು ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ವ್ಲಾಗ್ ಮಾಡಿದ್ರೆ, ಹೆಚ್ಚು ರೆವಿನ್ಯೂ ಬರತ್ತೆ. ಆದರೂ ಸಾಹಿಲ್ ಕನ್ನಡದಲ್ಲೇ ವ್ಲಾಗ್ ಮಾಡ್ತಾರೆ. ಯಾಕೆ ಹೀಗೆ ಅಂತಾ ಕೇಳಿದ್ದಕ್ಕೆ, ಉತ್ತರಿಸಿದ ಅವರು, ನಾವು ಹಾಗೆ ಮಾಡಿದ್ರೆ, ಮುಂದೆ ವ್ಲಾಗ್ ಮಾಡುವವರಿಗೆ ನಾವು ತಪ್ಪು ಸಂದೇಶ ಕಳುಹಿಸಿದಂತಾಗುತ್ತದೆ. ಹಾಗಾಗಿ ನಮ್ಮ ಭಾಷೆ, ಪವಿತ್ರ ಭಾಷೆ, ಕನ್ನಡ ಭಾಷೆ ಉತ್ತಮ ಭಾಷೆ. ಹಾಗಾಗಿ ನಾನು ಅದೇ ಭಾಷೆಯಲ್ಲೇ ವ್ಲಾಗ್ ಮಾಡಿದ್ದೇನೆ. ಮಾಡುತ್ತೇನೆ ಎಂದಿದ್ದಾರೆ ಸಾಹಿಲ್. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author