Health Tips: ಗರ್ಭಿಣಿಯರೇ ಎಚ್ಚರ! ಪ್ರೆಗ್ನೆನ್ಸಿ ಸಮಯದಲ್ಲಿ ಈ ಕ್ರೀಮ್‌ಗಳನ್ನು ಬಳಸಲೇಬೇಡಿ

Health Tips: ಮುಖದ ಸೌಂದರ್ಯ ಕಾಪಾಡುವುದು ಎಷ್ಟು ಮುಖ್ಯವೋ, ನಮ್ಮ ಆರೋಗ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ, ಕೆಲವು ಕ್ರೀಮ್‌ಗಳು ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಬಹುದು.

ಉದಾಹರಣೆಗೆ ಗರ್ಭಿಣಿಯರು ಕೆಲವು ಕ್ರೀಮ್‌ಗಳನ್ನು ಬಳಸುವಂತಿಲ್ಲ. ಹಾಗೆ ಬಳಸಿದ್ದಲ್ಲಿ, ಗರ್ಭದಲ್ಲಿರುವ ಮಗುವಿನ ಪ್ರಾಣಕ್ಕೆ ಹಾನಿಯಾಗುತ್ತದೆ. ಹಾಗಾಗಿ ನೀವು ವೈದ್ಯರ ಬಳಿ, ತ್ವಚೆಯ ಸಮಸ್ಯೆ ಹೇಳುವಾಗ, ನೀವು ಗರ್ಭಿಣಿಯಾಗಿದ್ದಲ್ಲಿ, ಆ ವಿಷಯವೂ ವೈದ್ಯರಿಗೆ ಹೇಳಲೇಬೇಕು.

ಏಕೆಂದರೆ ಹಲವು ಕ್ರೀಮ್‌ಗಳನ್ನು, ಚಿಕಿತ್ಸೆಗಳನ್ನು ಗರ್ಭಾವಸ್ಥೆಯಲ್ಲಿರುವಾಗ ನೀಡಲಾಗುವುದಿಲ್ಲ. ಹಾಗೆ ನೀಡುವುದರಿಂದ ಆ ಕ್ರೀಮ್ ದೇಹದಲ್ಲಿ ಹೋಗಿ, ಮಗುವಿನ ಆರೋಗ್ಯ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೋಟೋಕ್ಸ್ ಚಿಕಿತ್ಸೆ, ಲೇಸರ್ ಚಿಕಿತ್ಸೆ ಕೂಡ ನೀಡುವುದಿಲ್ಲ ಅಂತಾರೆ ವೈದ್ಯರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author