Web News: ಭಾರತದಲ್ಲಿ ಹಲವರು ಮಕ್ಕಳು ಕಾಲೇಜಿಗೆ ಹೋಗುವವರೆಗೂ ಮುದ್ದು ಮಾಡುತ್ತಾರೆ. ಅಂದ್ರೆ ಸಲುಗೆ ನೀಡುವುದಾಗಲಿ, ತಾವೇ ಸಾಕುವುದಾಗಲಿ, ಹೀಗೆ ಅತಿಯಾದ ಪ್ರೀತಿ ಮಾಡುತ್ತಾರೆ. ಆದರೆ ಚೀನಾದಲ್ಲಿ ಹಾಗಲ್ಲ, ಮಕ್ಕಳಿಗೆ ಶಾಲಾ ದಿನಗಳಲ್ಲೇ ಬದುಕುವುದು ಹೇಗೆ ಅಂತಾ ಹೇಳಿಕ“ಡಲಾಗುತ್ತದೆ. ದುಡಿಮೆಯ ಅರ್ಥ ಕಲಿಸಿಕ“ಡಲಾಗುತ್ತದೆ. ಅಲ್ಲದೇ ಅಲ್ಲಿನ ಶಿಕ್ಷಣ ವ್ಯವಸ್ಥೆ ಕೂಡ ಅತ್ಯುತ್ತಮವಾಗಿದೆ ಅಂತಾರೆ ಕನ್ನಡಿಗ ಸಾಹಿಲ್.
ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ಚೀನಾದಲ್ಲಿ ಮಕ್ಕಳ ವಿದ್ಯಾಭ್ಯಾಸ ಹೇಗಿದೆ ಅಂತಾ ವಿವರಿಸಿದ್ದಾರೆ.
ಚೀನಾದಲ್ಲಿ ಮಕ್ಕಳು ಈಗ ಎಐ ಬಗ್ಗೆ ಕಲಿಯುತ್ತಿದ್ದಾರಂತೆ. ಪ್ರಪಂಚ ಹೇಗೆ ಮುಂದುವರಿಯುತ್ತದೆಯೋ, ಅದಕ್ಕೆ ಕಾರಣವಾಗಿದ್ದು ಏನು ಎಂಬುದರ ಮೇಲೆ ಅಲ್ಲಿ ಶಿಕ್ಷಣ ನೀಡಲಾಗುತ್ತದೆ. ಇದೀಗ ಎಐ ಟ್ರೆಂಡಿಂಗ್ನಲ್ಲಿದ್ದು, ಚೀನಾದಲ್ಲಿ ಶಾಲಾ ಮಕ್ಕಳಿಗೆ ಈ ಬಗ್ಗೆಯೇ ಹೇಳಿಕ“ಡಲಾಗುತ್ತದೆ ಎನ್ನುತ್ತಾರೆ ಸಾಹಿಲ್.
ಇನ್ನು ಚೀನಾದಲ್ಲಿ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗಿಂತ ಅತ್ಯುತ್ತಮವಾಗಿದೆ. ಅಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಅಡ್ಮಿಶನ್ ಮಾಡ್ಬೇಕು ಅಂದ್ರೆ, ಮಕ್ಕಳು ತುಂಬಾ ಶ್ರಮ ವಹಿಸಿ, ಕಲಿಯಬೇಕು. ಜಾಣರಾಗಿರಬೇಕು. ಆಗಲೇ ಅವರಿಗೆ ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಸಿಗುತ್ತದೆ. ಅಲ್ಲಿ ವಿದ್ಯೆಯ ಜತೆ, ಆಹಾರ, ವಸ್ತ್ರ ಎಲ್ಲವನ್ನೂ ವಿತರಿಸಲಾಗುತ್ತದೆ. ತುಂಬಾ ಕ್ಲೀನ್ ಆಗಿ ಶಾಲೆಯನ್ನಿರಿಸಲಾಗುತ್ತದೆ. ಆಹಾರ ಕೂಡ ಆರೋಗ್ಯಕರವಾಗಿರುವ, ಶುದ್ಧವಾಗಿರುವ ಆಹಾರ ನೀಡಲಾಗುತ್ತದೆ.
ಅಲ್ಲದೇ ಮಕ್ಕಳ ಚಲನವಲನಗಳನ್ನು ಬಾಲ್ಯದಲ್ಲೇ ಗಮನಿಸುವ ಪೋಷಕರು, ಆ ಗುರಿ ಸಾಧನೆ ಮಾಡಲು ಏನೇನು ಬೇಕೋ ಅದನ್ನೇ ಮಾಡುತ್ತಾರೆ. ಅಲ್ಲಿ ಓದಿಗಿಂತ, ಮಗು ಯಾವ ಕಲೆಯಲ್ಲಿ ಜಾಣನಿದ್ದಾನೆ ಎಂದು ತಿಳಿದು ಬೆಳೆಸಲಾಗುತ್ತದೆ. ಕಲಿಕೆಯಲ್ಲಿ ದಡ್ಡನಾಗಿದ್ದರೂ, ಬೇರೆ ಯಾವುದರಲ್ಲಿ ಭವಿಷ್ಯ ರೂಪಿಸಿಕ“ಳ್ಳುತ್ತಾನೋ, ಆ ಕೆಲಸದಲ್ಲಿ ಕರಗತ ಮಾಡಲು ಪ್ರಯತ್ನಿಸುತ್ತಾರೆ ಅಂತಾರೆ ಸಾಹಿಲ್. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




