Bengaluru: ಮಹಾ ಶಿವರಾತ್ರಿಯ ದಿನದಂದು ನಾನ್‌ವೆಜ್ ತಿನ್ನಬಾರದು ಅಂತಾ, ವೆಜ್ ಬಿರ್ಯಾನಿ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಚಿಕನ್ ಪೀಸ್ ಇರುವ ಬಿರಿಯಾನಿ ನೀಡಿ, ಷರೀಫ್ ಭಾಯ್ ಬಿರಿಯಾನಿ ರೆಸ್ಟೋರೆಂಟ್ ನಿರ್ಲಕ್ಷ್ಯ ತೋರಿದೆ.
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಂಜಯ್ ಕೊಪ್ಪ ಎಂಬುವವರು ಷರೀಫ್ ಭಾಯ್ ಬಿರಿಯಾನಿಯಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಆ ಬಿರಿಯಾನಿಯಲ್ಲಿ ಚೀಕನ್ ಪೀಸ್ ಸಿಕ್ಕಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸಂಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಮಹಾಶಿವರಾತ್ರಿಯಾಗಿದ್ದರಿಂದ ನಾನ್‌ವೆಜ್ ತಿನ್ನೋದು ಬೇಡವೆಂದು ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಬಾಕ್ಸ್ ಮೇಲೆ ಹಸಿರು ಮಾರ್ಕ್ ಇತ್ತು. ಅಂದ್ರೆ ವೆಜ್ ಅಂತಾ ಅರ್ಥ. ಆದರೆ ಬಿರಿಯಾನಿಯಲ್ಲಿ ಚಿಕನ್ ಸಿಕ್ಕಿತ್ತು. ಇದು ನಿರಾಶಾದಾಯಕ ಮತ್ತು ಅಸಹ್ಯಕರ ಸಂಗತಿ ಅಂತಾ ಸಂಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
Very disappointed. I ordered Paneer Biryani (Veg) today through Magicpin from Sharief Bhai Biryani, Basaveshwara Nagar, especially because of the Maha Shivaratri festival. The box was labeled “Veg,” but I found a piece of chicken inside. @fssaiindia @publictvnews @AsianetNewsSN pic.twitter.com/Rhg5Q2prAu
— Sanjay koppa (@SanjayS77690608) February 16, 2026




