ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರ ಕನಸಿನ ಕ್ರಾಂತಿಕಾರಿ ಸುಧಾರಣಾ ಯೋಜನೆಗಳು

Political News: ಸಾಮಾಜಿಕ ಸಮಾನತೆ ಸಾಧ್ಯವಾಗಬೇಕಾದರೆ ಆರ್ಥಿಕ ಸಮಾನತೆ ಬಹಳ ಮುಖ್ಯ. ಇಂತಹ ಆರ್ಥಿಕ ಸಮಾನತೆ ಸಾಧಿಸಲು ಎಲ್ಲ ವರ್ಗದ ಜನರಿಗೆ ಸೂಕ್ತ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸುವುದು ಅತಿ ಅಗತ್ಯವಾಗುತ್ತದೆ. ಸೂಕ್ತ ವೇದಿಕೆ ಮತ್ತು ಅವಕಾಶಗಳು ಸಿಗಲು ಬೇಕಾದ ವಿದ್ಯಾರ್ಹತೆ ಮತ್ತು ಸೂಕ್ತ ವಾತಾವರಣ ಅತ್ಯಂತ ಪ್ರಾಥಮಿಕವಾದ ಅಗತ್ಯಗಳಾಗಿವೆ. ಇಂತಹ ಅಗತ್ಯಗಳನ್ನು ಪೂರೈಸಬೇಕಾದುದು ನಾಗರಿಕ ಕಲ್ಯಾಣದ ಮತ್ತು ಸಮ ಸಮಾಜದ ಬಗ್ಗೆ ಯೋಚಿಸುವ ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ.

ಕಾರ್ಮಿಕ ವಲಯದಲ್ಲಿ ಸಂಘಟಿತ ವಲಯದ ಕಾರ್ಮಿಕರಿಗೆ ಅನೇಕ ರೀತಿಯ ಭದ್ರತೆಗಳು ಸಹಜವಾಗಿಯೇ ಸಾಧ್ಯವಾಗುತ್ತವೆ ಆದರೆ, ಅಸಂಘಟಿತ ವಲಯದ ಕಾರ್ಮಿಕರ ವಿಷಯದಲ್ಲಿ ಅಭದ್ರತೆಯೇ ಪಾರಮ್ಯ. ಈ ಅಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಕಾರ್ಮಿಕ ಮಂತ್ರಿಗಳಾದ ಶ್ರೀ ಸಂತೋಷ್ ಎಸ್. ಲಾಡ್ ಅವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅನೇಕ ಸುಧಾರಣೆಗಳನ್ನು ಈಗಾಗಲೇ ಸಾಕಾರಗೊಳಿಸಿದೆ.

ಈ ನಿಟ್ಟಿನಲ್ಲಿ ಎರಡನೇ ಅವಧಿಗೆ ಕಾರ್ಮಿಕ ಇಲಾಖೇಯನ್ನೇ ಬಯಸಿ ಪಡೆದಿರುವ ಶ್ರೀ. ಸಂತೋಷ್ ಎಸ್. ಲಾಡ್ ಅವರು ಕಳೆದ ಮೂರು ವರ್ಷಗಳಿಂದ ಅಸಂಘಟಿತ ವಲಯದ ಕಾರ್ಮಿಕರ ಬದುಕಿನಲ್ಲಿ ವ್ಯಾಪಕ ಬದಲಾವಣೆಗೆ ಕಾರಣರಾಗಿದ್ದಾರೆ. ಅವರ ಸೇವಾ ಮತ್ತು ಸಾಮಾಜಿಕ ಭದ್ರತೆಗಾಗಿ ತಂದ ನಾಲ್ಕಾರು ಕಾನೂನುಗಳು ಹತ್ತಾರು ಯೋಜನೆಗಳು ದೇಶದಲ್ಲೇ ಅಂಗ್ರಪಂಕ್ತಿಯಲ್ಲಿ ನಿಲ್ಲುತ್ತವೆ.

ಪ್ರಮುಖ ಕಾಯಿದೆಗಳನ್ನು ಹೆಸರಿಸುವುದಾರೆ, ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಕಾಯ್ದೆ -೨೦೨೪, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ (ಕ್ಷೇಮಾಭಿವೃದ್ಧಿ) ಕಾಯ್ದೆ, ೨೦೨೪, ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಕ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ಕಾಯ್ದೆ -೨೦೨೫ ಈಗಾಗಲೇ ಸಾಕಾರಗೊಂಡಿವೆ.

ಈ ಕಾನೂನುಗಳ ಅನ್ವಯ, ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ಹಾಗೂ ಕ್ಷೇಮಾಭಿವೃದ್ಧಿ ಮಂಡಳಿ (KSGWIWB) ರಚೆನೆಯಾಗಿದೆ. ಕರ್ನಾಟಕ ರಾಜ್ಯ ಪತ್ರಿಕಾ ವಿತರಕ ಕಾರ್ಮಿಕರ ಅಪಘಾತ ಹಾಗೂ ಆರೋಗ್ಯ ಸಹಾಯ ನಿಧಿ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, 100 ಹೈಟೆಕ್ ಸಂಚಾರಿ ಆರೋಗ್ಯ ಘಟಕಗಳು, ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯ, ಶ್ರಮಿಕ ವಸತಿ ಶಾಲೆಗಳು, ಧಾರವಾಡ ಮತ್ತು ಮೈಸೂರಿನಲ್ಲಿ ಕೌಶಲ್ಯ ಕೇಂದ್ರಗಳ ಸ್ಥಾಪನೆ, ಅಂಬೇಡ್ಕರ್ ಕಾರ್ಮಿಕ ಸೇವಾಕೇಂದ್ರ, ಜಿ ಐಎಸ್ ಮ್ಯಾಪಿಂಗ್, ಅಂಬೇಡ್ಕರ್ ಸಹಾಯಹಸ್ತ ಯೋಜನೆ, ನಕಲಿ ಕಾರ್ಮಿಕ ಕಾರ್ಡ್ ಗಳ ರದ್ಧತಿ, ಕಡ್ಡಾಯ ಉಪಧನ, ಕೌಶಲ್ಯ ಕೇಂದ್ರಗಳ ಸ್ಥಾಪನೆ, ಸಂಚಾರಿ ಆರೋಗ್ಯ ಘಟಕಗಳು, ಇಎಸ್ ಐ ಆಸ್ಪತ್ರೆಗಳಗ ಉನ್ನತೀಕರಣ, ಕಾರ್ಮಿಕರ ಸುರಕ್ಷತೆ, ಆರೋಗ್ಯ ಹಾಗೂ ಕಾರ್ಮಿಕ ಕಾನೂನುಗಳ ಕುರಿತ ಜಾಗೃತಿ, ಪರಿಷ್ಕೃತ ಕನಿಷ್ಠ ವೇತನ, ಹೊರಗುತ್ತಿಗೆ ಕಾರ್ಮಿಕರ ನೇಮಕಕ್ಕೆ ಸಮಿತಿ ರಚನೆ (ಬೀದ‌ರ್ ಮಾದರಿ), ಶ್ರಮಿಕ ವಸತಿ ಶಾಲೆಗಳು, ಜಿ.ಐ.ಎಸ್. ಮ್ಯಾಪಿಂಗ್ ಮತ್ತು ವೈಜ್ಞಾನಿಕ ಸೆಸ್ ಸಂಗ್ರಹ, ಖಾಸಗಿ ವಲಯದ ಉದ್ದಿಮೆಗಳಲ್ಲಿ ಪ.ಜಾತಿ / ಪ.ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ʼಆಶಾದೀಪʼ ಯೋಜನೆ/ ಕಾರ್ಯಕ್ರಮಗಳು ಜಾರಿಯಲ್ಲಿವೆ.

ಇದೇ ನಿಟ್ಟಿನಲ್ಲಿ ಮುಂದಡಿಯಿಟ್ಟಿರುವ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಅವರು, ವೇತನಸಹಿತ ಋತುಚಕ್ರ ರಜೆ ನೀತಿಗೆ ಮತ್ತು ಕಾರ್ಮಿಕರ ಪರ ವಾದಿಸಲು ವಕೀಲರ ಯಾದಿ ರಚಿಸಲು ಸರ್ಕಾರದ ಅನುಮೋದನೆ ಪಡೆದಿದ್ದಾರೆ. ಇದೀಗ , ಖಾಸಗಿ ವಲಯಗಳಲ್ಲಿ ವಿಶೇಷಚೇತನರ ಮೀಸಲಾತಿ ಒದಗಿಸುವ ಕರ್ನಾಟಕ ಉದ್ಯೋಗ ಮತ್ತು ಶೈಕ್ಷಣದಲ್ಲಿ ವಿಕಲಚೇತನರ ಹಕ್ಕುಗಳ ಮಸೂದೆ ೨೦೨೫, ಕರ್ನಾಟಕ ನಿರಾಶ್ರಿತ ವಿಧವಾ ಅಸಂಘಟಿತ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ – ೨೦೨೬ ಮಸೂದೆಗಳು ಹಂತಿಮ ಹಂತದಲ್ಲಿವೆ.

ಕರ್ನಾಟಕ ಉದ್ಯೋಗ ಮತ್ತು ಶೈಕ್ಷಣದಲ್ಲಿ ವಿಕಲಚೇತನರ ಹಕ್ಕುಗಳ ಮಸೂದೆ ೨೦೨೫
ಕರ್ನಾಟಕ ರಾಜ್ಯದಲ್ಲಿ ವಿಕಲಚೇತನರಿಗೆ ಖಾಸಗಿ ಉದ್ಯೋಗ ಕ್ಷೇತ್ರ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸಲು ಮತ್ತು ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಮಸೂದೆ ತರಲು ಯೋಜಿಸಲಾಗಿದೆ. ವಿಕಲಚೇತನರ ಹಕ್ಕುಗಳ ಕಾಯ್ದೆ, 2016ನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಕರ್ನಾಟಕದ ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ ಕರ್ನಾಟಕ ಮನೆಕೆಲಸದ ಕಾರ್ಮಿಕ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ -೨೦೨೬,ಸೂಕ್ತ ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

ಈ ಹಿನ್ನೆಲೆಯಲ್ಲಿ, ವಿಕಲಚೇತನರಿಗೆ ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಶೇ.5 ರಷ್ಟು ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿಯನ್ನು ಕಲ್ಪಿಸಲು ರಚಿಸಲಾಗಿರುವ ಕರಡು ಮಸೂದೆಯನ್ನು (ಕರಡು ಮಸೂದೆಯನ್ನು ಇದರೊಂದಿಗೆ ಲಗತ್ತಿಸಿದೆ) ರೂಪಿಸಲಾಗಿದೆ.

ಕರ್ನಾಟಕ ಮನೆಕೆಲಸದ ಕಾರ್ಮಿಕ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ -೨೦೨೬

ಅಸಂಘಟಿತ ಕಾರ್ಮಿಕರಲ್ಲಿ ಮನೆಕೆಲಸದವರು ಪ್ರಮುಖವಾಗಿ ಗುರುತಿಸಿಕೊಳ್ಳುತ್ತಾರೆ. ಇಂತಹ ಮನೆಕೆಲಸದವರ ಕಲ್ಯಾಣಕ್ಕೂ ಕಾರ್ಮಿಕ ಇಲಾಖೆ ಗಮನಹರಿಸಿದೆ. ಇದೀಗ, ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯು, ಕರ್ನಾಟಕ ಮನೆಕೆಲಸದವರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ-೨೦೨೬ರ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಇವರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕೆ ಕಾನೂನು ಜಾರಿಗೆ ಮುಖ್ಯವಾದ ಹೆಜ್ಜೆ ಇಟ್ಟಿದೆ.

ಕರ್ನಾಟಕ ನಿರಾಶ್ರಿತ ವಿಧವಾ ಅಸಂಘಟಿತ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ – ೨೦೨೬

ಕರ್ನಾಟಕ ರಾಜ್ಯದಲ್ಲಿನ ನಿರಾಶ್ರಿತ ವಿಧವಾ ಅಸಂಘಟಿತ ಕಾರ್ಮಿಕರ ಹಕ್ಕು ಆಧಾರಿತ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಗಾಗಿ ಈ ವಿದೇಯಕವನ್ನು ರೂಪಿಸಲಾಗುತ್ತಿದೆ.

ಮುಖ್ಯಾಂಶಗಳು:
ಪತಿಯು ಮೈತನಾಗಿರುವ, ಅಸಂಘಟಿತ ವರ್ಗಕ್ಕೆ ಸೇರಿದ ಅನೌಪಚಾರಿಕ, ಮನೆ ಆಧಾರಿತ ಗೃಹಕಾರ್ಯ, ಕೃಷಿ, ಸ್ವಯಂ ಉದ್ಯೋಗ, ಗಿಗ್ ಅಥವಾ ಸಾಂದರ್ಭಿಕ ಕೆಲಸದಲ್ಲಿ ತೊಡಗಿರುವ ಅಥವಾ ತೊಡಗಲು ಸಮರ್ಥಳಾಗಿರುವ, ಜೀವನೋಪಾಯಕ್ಕೆ ತಕ್ಕಷ್ಟು ಸಾಧನೆಗಳು ಇಲ್ಲದೆ ಅಸಹಾಯಕತೆ, ಪರಿತ್ಯಕ್ಷ, ನಿರಾಶ್ರಿತ ಸ್ಥಿತಿ ಅಥವಾ ಆರ್ಥಿಕ ಸಂಕಷ್ಟದಲ್ಲಿ ಬದುಕುತ್ತಿರುವ ಮಹಿಳೆಯರಿಗೆ ಇದು ಅನ್ವಯವಾಗುತ್ತದೆ.

ನೋಂದಾಯಿತ ನಿರಾಶ್ರಿತ ವಿಧವಾ ಅಸಂಘಟಿತ ಕಾರ್ಮಿಕರ ಮೇಲೆ ಅವಲಂಬಿತವಾಗಿರುವ ಅವಲಂಬಿತವಾಗಿರುವ ಅಪ್ರಾಪ್ತ ವಯಸ್ಸಿನ ಕಾನೂನುಬದ್ಧ ಅಥವಾ ದತ್ತು ಪಡೆದ ಮಗು, ವಿಧವೆಯ ಆದಾಯದ ಮೇಲೆ ಅವಲಂಬಿತವಾಗಿರುವ ಮಗು, ಇಪ್ಪತ್ತೊಂದು ವರ್ಷ ವಯಸ್ಸನ್ನು ತಲುಪುವವರೆಗೆ ಶಿಕ್ಷಣ ಪಡೆಯುತ್ತಿರುವ ಮಗು, ಅವಿವಾಹಿತಪುತ್ರಿ, ಅವಲಂಬಿತ ಪೋಷಕರು. ದೈಹಿಕ ಅಥವಾ ಮಾನಸಿಕ ಅಸಾಮಾನ್ಯತೆ ಅಥವಾ ಗಾಯದಿಂದಾಗಿ ಅಶಕ್ತನಾಗಿರುವ ಹಾಗೂ ನೋಂದಾಯಿತ ನಿರಾಶ್ರಿತ ವಿಧವಾ ಅಸಂಘಟಿತ ಕಾರ್ಮಿಕರ ಆದಾಯದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಮಗು, ಅಶಕ್ತತೆ ಮುಂದುವರಿಯುವವರೆಗೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುತ್ತದೆ.

ಕನಿಷ್ಠ ವೇತನ ಪರಿಷ್ಕರಣೆ ಮತ್ತು ಪೆಟ್ರೋಲಿಯಂ ಸೆಸ್
ರಾಜ್ಯದಲ್ಲಿರುವ ಎಲ್ಲಾ ವರ್ಗಗಳ ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹಾಗೂ ಕಾರ್ಮಿಕರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಸಮಗ್ರ ಸಾಮಾಜಿಕ ಭದ್ರತಾ ಯೋಜನೆಯನ್ನು ರೂಪಿಸಿ ಜಾರಿಗೊಳಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ. ಇದಕ್ಕಾಗಿ ಬೇಕಾದ ಅನುದಾನವನ್ನು ಪೆಟ್ರೋಲ್, ಡೀಸಲ್, ಹಾಗೂ ಇಥನಾಲ್‌ನಂತಹ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ರಾಜ್ಯ ಸರ್ಕಾರವು ವಿಧಿಸುವ ತೆರಿಗೆ ಜೊತೆಗೆ ಹೆಚ್ಚುವರಿ ತೆರಿಗೆ ವಿಧಿಸುವುದರ ಮೂಲಕ ಅನುದಾನವನ್ನು ಕ್ರೋಢೀಕರಿಸಲು ಉದ್ದೇಶಿಸಲಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುವ ಹೆಚ್ಚುವರಿ ತೆರಿಗೆಯ ಹಣದಿಂದ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವನೆಯನ್ನು ಕಳಿಸಲಾಗಿತ್ತು. ಆದರೆ, ಈಗ ಉದ್ದೇಶಿತ ಯೋಜನೆಗಳಿಗೆ ಬೇಕಾದ ಹಣದ ಅಗತ್ಯಕ್ಕನುಗುಣವಾಗಿ ಪರಿಷ್ಕೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

About The Author