Health Tips: ಹಾರ್ಟ್ ಮೇಲೆ ಒತ್ತಡ ಜಾಸ್ತಿಯಾದ್ರೆ ಸ್ಟ್ರೋಕ್ ಪಕ್ಕ! : Dr Pavan Kumar

Health Tips: ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಾವು ಸೇವಿಸುವ ಆಹಾರ ಸರಿಯಾಗಿರಬೇಕು. ನಮ್ಮ ಜೀವನ ಶೈಲಿಯೂ ಉತ್ತಮವಾಗಿರಬೇಕು ಅಂತಾರೆ ವೈದ್ಯರು.

ಡಾ.ಪವನ್ ಕುಮಾರ್ ಹೃದಯದ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ನಮ್ಮ ಹೃದಯವನ್ನು ಚೆನ್ನಾಗಿ ಕಾಪಾಡಬೇಕು ಅಂದ್ರೆ, ನಾವು 5 ನಿಯಮಗಳನ್ನು ಪಾಲಿಸಬೇಕು.

ಮೊದಲನೇಯದ್ದು ನಾವು ಬಿಪಿ, ಶುಗರ್, ತೂಕ ಹೆಚ್ಚಾಗಿರುವುದು. ಇವುಗಳನ್ನೆಲ್ಲ ನಾವು ಕಂಟ್ರೋಲಿನಲ್ಲಿಡಲು ಪ್ರಯತ್ನಿಸಬೇಕು.

ಎರಡನೇಯದ್ದು ಡಯಟ್. ಅಂದ್ರೆ ನಾವು ಸೇವಿಸುವ ಆಹಾರ ಸಮತೋಲನವಾಗಿರಬೇಕು. ವಿಟಾಮಿನ್ಸ್, ಮಿನರಲ್ಸ್, ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್, ಎಲ್ಲವೂ ಸಮ ಪ್ರಮಾಣದಲ್ಲಿರುವ ಆಹಾರಗಳ ಸೇವನೆ ನಾವು ಮಾಡಬೇಕು.

ಮೂರನೇಯದ್ದಾಗಿ, ಒತ್ತಡ. ನಾವು ಮಾಡುವ ಕೆಲಸದಲ್ಲಿ ನಾವು ಹೆಚ್ಚು ಒತ್ತಡ ಅನುಭವಿಸಬಾರದು. ಕೆಲಸವಲ್ಲದೇ, ಯಾವುದೇ ವಿಷಯದಲ್ಲೂ ನಮಗೆ ಮಾನಸಿಕ, ದೈಹಿಕ ಒತ್ತಡವಿರಬಾರದು. ಹಾಗೆ ಒತ್ತಡ ಅನುಭವಿಸಿದ್ದಲ್ಲಿ, ನಮ್ಮ ಹೃಗಯ ಅನಾರೋಗ್ಯಕ್ಕೀಡಾಗುತ್ತದೆ.

ನಾಲ್ಕನೇಯದ್ದು, ವ್ಯಾಯಾಮ. ನಾವು ಪ್ರತಿದಿನ ಕೆಲ ನಿಮಿಷಗಳಾದ್ರೂ ವ್ಯಾಯಾಮ, ಯೋಗ, ವಾಕಿಂಗ್ ಮಾಡಬೇಕು. ಇದರಿಂದ ನಮ್ಮ ದೇಹ ಫಿಟ್ ಆಗಿರುತ್ತದೆ. ಉತ್ತಮ ಆಹಾರ ಸೇವನೆ ಮಾಡಬೇಕು. ಚೆನ್ನಾಗಿ ನಿದ್ರಿಸಬೇಕು. ಇದರಿಂದ ನಮ್ಮ ದೇಹ ಆರೋಗ್ಯಕರವಾಗಿರುತ್ತದೆ. ಇವುಗಳಲ್ಲಿ ಒಂದು ಕಡಿಮೆಯಾದರೂ, ಅದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

ಐದನೇಯದಾಗಿ, ಬ್ಯಾಡ್ ಹ್ಯಾಬಿಟ್ಸ್ ದಾಸರಾಗಿದ್ದಲ್ಲಿ, ನಾವು ಅದನ್ನು ಬಿಡಬೇಕಾಗುತ್ತದೆ. ಏಕೆಂದರೆ, ಧೂಮಪಾನ, ಮದ್ಯಪಾನವೇ ನಮ್ಮ ಹೃದಯದ ಆರೋಗ್ಯ ಹಾಳು ಮಾಡುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author