ಸುಳ್ಳಿನ ಕೊಚ್ಚೆಯಲ್ಲಿ ಬಿದ್ದು ಒದ್ದಾಡೋ ಬದಲು, ಪ್ರಧಾನಿ ಎದುರು ಧ್ವನಿ ಎತ್ತಿ: ಬಿಜೆಪಿ ವಿರುದ್ಧ ಗುಂಡೂರಾವ್ ಕಿಡಿ

Political News: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖಾಲಿಯಾಗಿದ್ದು, ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಸರಿಯಾದ ಕ್ರಮ ಕೈಗ“ಳ್ಳುತ್ತಿಲ್ಲವೆಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದು, ಈ ಆರೋಪಕ್ಕೆ ಆರೋಗ್ಯ ಸಚಿವರು ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಕಮಿಷನ್ ಮತ್ತು ಭ್ರಷ್ಟಾಚಾರ ಎಂಬುದು ಬಿಜೆಪಿಯ ಮೈಗಂಟಿದ ಚರ್ಮ ಅನ್ನೋದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ. 40% ಕಮಿಷನ್ ದಂಧೆಯಿಂದ ಬೇಸತ್ತು ಜನ ನಿಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದರೂ, ಎಡಿಟ್ ಮಾಡಿದ ಫೋಟೋ ಹಿಡಿದು ಸುಳ್ಳು ಹರಡುವ ನೀಚತನ ಬಿಟ್ಟಿಲ್ಲ. ಆರೋಗ್ಯ ಇಲಾಖೆಯಲ್ಲಿ ನಾವು ಅತ್ಯಂತ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ, ಧೈರ್ಯವಿದ್ದರೆ ವಾಸ್ತವದ ಅಂಕಿಅಂಶಗಳನ್ನು ನೋಡಿ ಮಾತನಾಡಿ.

ಕೇಂದ್ರದ ನಿಮ್ಮದೇ ಮೋದಿ ಸರ್ಕಾರ NHM ಅನುದಾನ ತಡೆಹಿಡಿದಿದ್ದರೂ ರಾಜ್ಯದ ಬಡ ರೋಗಿಗಳಿಗೆ ತೊಂದರೆಯಾಗಬಾರದೆಂದು ನಮ್ಮ ಕಾಂಗ್ರೆಸ್ ಸರ್ಕಾರ ಈಗಾಗಲೇ ₹30 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. ಇದಲ್ಲದೆ ₹50 ಕೋಟಿ ಹಣವನ್ನು ಔಷಧಿ ಖರೀದಿಗೆ ಮೀಸಲಿಟ್ಟು, 496 ಅಗತ್ಯ ಔಷಧಿಗಳ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ. GeM ಪೋರ್ಟಲ್ ಮೂಲಕವೇ ಅತ್ಯಂತ ಪಾರದರ್ಶಕವಾಗಿ ಖರೀದಿ ನಡೆಯುತ್ತಿದೆ.

ರಾಜ್ಯದ ತೆರಿಗೆ ಪಾಲು, ಎನ್‌ಎಚ್‌ಎಂ ಸೇರಿದಂತೆ ಹೀಗೆ ಸಾಲು ಸಾಲು ಅನುದಾನ ಬಾಕಿಯಿದ್ದರೂ ಮೋದಿ ಮುಂದೆ ಉಸಿರು ಬಿಡಲಾಗದೆ ಹೇಡಿಗಳಂತಿರುವ ಬಿಜೆಪಿ ಸಂಸದರು, ಸಚಿವರುಗಳು ಇನ್ನಾದರೂ ಮತಕೊಟ್ಟವರಿಗಾಗಿ ಮಾತಾಡಲಿ. ಸದಾ ಸುಳ್ಳಿನ ಕೊಚ್ಚೆಯಲ್ಲಿ ಬಿದ್ದು ಒದ್ದಾಡುವ ಬದಲು, ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತುವ ಧೈರ್ಯ ತೋರಿಸುವಿರಾ ನೋಡಿ?

About The Author