Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಅರ್ಧ ಸ್ಪೂನ್ ಜೀರಿಗೆ, ಬಟಾಣಿ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಗರಂ ಮಸಾಲೆ, ಉಪ್ಪು.

ಮಾಡುವ ವಿಧಾನ: ಬಾಸ್ಮತಿ ರೈಸ್‌ನ್ನು ಚೆನ್ನಾಗಿ ವಾಶ್ ಮಾಡಿ, ನಂತರ 1 ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಇಡಿ. ನೀರು ಕುದಿಸಿದ ಬಳಿಕ ಅದಕ್ಕೆ, ಸ್ವಲ್ಪ ಜೀರಿಗೆ, ಏಲಕ್ಕಿ, ದಾಲ್ಚಿನಿ, ಲವಂಗ, ಪಲಾವ್ ಎಲೆ ಹಾಕಿ ಕುದಿಸಿ, ಬಳಿಕ ಅಕ್ಕಿ ಹಾಕಿ ಬೇಯಿಸಿ. ಬಳಿಕ ಉದುರುದುರಾದ ಬಾಸ್ಮತಿ ಅನ್ನ ತಯಾರಿಸಿ. ರೆಡಿಯಾದ ಅನ್ನವನ್ನು ತಣಿಯಲು ಇರಿಸಿ.

ಪ್ಯಾನ್ ಬಿಸಿ ಮಾಡಲು ಇಡಿ, ಅದರಲ್ಲಿ ಎಣ್ಣೆ, ತುಪ್ಪ ಹಾಕಿ. ಪಲಾವ್ ಎಲೆ, ಲವಂಗ, ದಾಲ್ಚೀನಿ, ಏಲಕ್ಕಿ, ಕಾಳುಮೆಣಸು, ಜೀರಿಗೆ ಹಾಕಿ, ಹುರಿಯಿರಿ. ನಂತರ ಈರುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಟೋಮೆಟೋ ಹಾಕಿ ಹುರಿಯಿರಿ.

ಬಳಿಕ ಖಾರದ ಪುಡಿ, ಗರಂ ಮಸಾಲೆ, ಉಪ್ಪು, ಅರಿಶಿನ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್ ಹಾಕಿ ಮಿಕ್ಸ್ ಮಾಡಿ, ನಂತರ ರೆಡಿಯಾದ ಅನ್ನ ಹಾಕಿ ಮಿಕ್ಸ್ ಮಾಡಿದ್ರೆ, ಟೋಮೆಟೋ ರೈಸ್ ರೆಡಿ.

ಈಗ ಇದಕ್ಕೆ ರಾಯ್ತಾ ಮಾಡಲು ಈರುಳ್ಳಿ,ಟೋಮೆಟೋ, ಸೌತೇಕಾಯಿ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು ಎಲ್ಲವನ್ನೂ ಸಣ್ಣಗೆ ಕತ್ತರಿಸಿ, ಬೌಲ್‌ಗೆ ಹಾಕಿ. ಇದಕ್ಕೆ ಉಪ್ಪು, ಜೀರಿಗೆ ಪುಡಿ, ರುಬ್ಬಿದ ಕಾಯಿ, ಮೊಸರು ಹಾಕಿ, ಒಗ್ಗರಣೆ ನೀಡಿದ್ರೆ, ರಾಯ್ತಾ ರೆಡಿ.

About The Author