Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು ಅಂತ್ಯ ಮಾಡಲು ಇಚ್ಛಿಸಿರುವ ಪತ್ನಿ ಸಂಗೀತಾ, ವಿಜಯ್ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದಾರೆ.

ವಿಜಯ್‌ಗೆ ನಟಿಯ ಜತೆ ಅಫೇರ್ ಇದೆ ಎಂದು ಆರೋಪಿಸಿರುವ ಸಂಗೀತಾ, ಚೆಂಗಲ್‌ಪಟ್ಟು ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದಳಪತಿಗೆ ಅಫೇರ್ ಇದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಜನ ಇದು ಸುಳ್ಳು ಸುದ್ದಿ ಎಂದೇ ತಿಳಿದಿದ್ದರು. ಆದರೆ ಇದೀಗ ಪತ್ನಿ ಅರ್ಜಿ ಸಲ್ಲಿಸಿದ ಕಾರಣ, ವಿಷಯ ಸತ್ಯ ಹೌದೋ ಅಲ್ಲವೋ ಅಂತಾ ಸ್ಪಷ್ಟವಾಗಬೇಕಿದೆ.

ವಿಜಯ್ ಅಭಿನಯದ ಜನನಾಯಗನ್ ಸಿನಿಮಾ ತೆರೆಗೆ ಬರಬೇಕಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ, ವಿಜಯ್ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದು, ರಾಜಕೀಯದಲ್ಲೇ ಸಕ್ರೀಯರಾಗಬೇಕೆಂದಿದ್ದಾರೆ. ಅದಕ್ಕಾಗಿ ಸಕಲ ತಯಾರಿಯನ್ನೂ ಮಾಡುತ್ತಿದ್ದಾರೆ. ಆದರೆ ಇದೀಗ ಇವರ ವಿರುದ್ಧ ಕೇಳಿ ಬಂದಿರುವ ಆರೋಪದಿಂದ, ಅವರ ರಾಜಕೀಯ ಜೀವನದಲ್ಲಿ ಸಂಕಷ್ಟ ಎದುರಾಗುವ ಎಲ್ಲ ಸಾಧ್ಯತೆಗಳಿದೆ.

About The Author