Web News: ಯ್ಯೂಟೂಬರ್ ವಿಕಾಸ್ ಗೌಡ ಸಂದರ್ಶನದಲ್ಲಿ ಮಾತನಾಡಿದ್ದು, ಯೂಟ್ಯೂಬ್ ಮಾಡಿ ಬದುಕಬಹುದಾ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಯೂಟ್ಯೂಬ್‌ನಲ್ಲಿ ನೆಗೆಟಿವ್ ಕಾಮೆಂಟ್ಸ್ ಬರೋ ಬಗ್ಗೆ ಮಾತನಾಡಿರುವ ವಿಕಾಸ್, ಎಂಥೆಂಥಾ ಹೀರೋ, ಹಿರೋಯಿನ್‌ಗಲಿಗೆಲ್ಲಾ ನೆಗೆಟಿವ್ ಕಾಮೆಂಟ್ಸ್ ಬರುವಾಗ, ನಾವೇನ್ ಮಹಾ ಎಂದಿದ್ದಾರೆ. ಅಲ್ಲದೇ, ಸುಮ್ಮನೆ ಏನೇನೋ ಕಾಮೆಂಟ್ ಮಾಡಿದ್ರೆ ಹೆಚ್ಚು ತಲೆ ಕೆಡಿಸಿಕ“ಳ್ಳಲ್ಲ. ಆದರೆ ಅತೀಯಾಗಿ, ಕೆಟ್ಟದಾಗಿ ಕಾಮೆಂಟ್ ಮಾಡಿದ್ರೆ, ಬ್ಲಾಕ್ ಮಾಡ್ತೀನಿ ಎಂದಿದ್ದಾರೆ ವಿಕಾಸ್.
ಇನ್ನು ಯೂಟ್ಯೂಬ್‌ನಲ್ಲಿ ದುಡ್ಡು ಮಾಡೋ ಬಗ್ಗೆ ಮಾತನಾಡಿರುವ ವಿಕಾಸ್, ನಾನು ತಿಂಗಳಿಗೆ ಬರೀ ಯೂಟ್ಯೂಬ್‌ನಿಂದ 1 ಲಕ್ಷ ರೂಪಾಯಿ ತನಕ ದುಡಿಯುತ್ತೇನೆ. ನೀವು ಉತ್ತಮ ವೀಡಿಯೋಸ್ ಮಾಡಿ ಹಾಕಿದ್ರೆ, ಜನ ನೋಡ್ತಾರೆ. ವೀವ್ಸ್ ಬರತ್ತೆ. ನಿಮ್ಮ ಬಳಿ 1 ಐಫೋನ್ ಇದ್ರೆ, ನೀವು ಕ್ಲಾರಿಟಿ ಇರುವ ವೀಡಿಯೋ ಮಾಡಬಹುದು. ಮುಂಚೆ ನನ್ನ ಬಳಿ ಸಣ್ಣ ಆ್ಯಂಡ್ರಾಯ್ಡ್ ಫೋನ್ ಇತ್ತು. ಈಗ ನನ್ನ ಬಳಿ 2 ಐಫೋನ್ ಇದೆ ಅಂತಾರೆ ವಿಕಾಸ್.
ಇನ್ನು ಗರ್ಲ್‌ಫ್ರೆಂಡ್ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ವಿಕಾಸ್. ಅದಕ್ಕೆಲ್ಲಾ ತುಂಬಾ ಟೈಮ್ ಇದೆ. ಇನ್ನೂ ಸುಮಾರು ಸಾಧಿಸೋದು ಬಾಕಿ ಇದೆ. ಆಮೇಲೆ ಅದೆಲ್ಲಾ ಹೇಳ್ತೀನಿ ಅಂತಾ ಹಾರಿಕೆಯ ಉತ್ತರ ನೀಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




