Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಬಾಲ್ಯ, ಕಾಂಗ್ರೆಸ್ ಪಾರ್ಟಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇಂದಿನ ಕಾಲದಲ್ಲಿ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳೂ ರಾಜಕೀಯಕ್ಕೆ ಬರಲಿ ಅಂತಾ ರಾಜಕಾರಣಿಗಳು ಹಾದಿ ಮಾಡಿ ಕೊಡುವ ಸಮಯದಲ್ಲಿ ರಮೇಶ್ ಕುಮಾರ್ ಅವರು, ತಮ್ಮ ಕಾಲಕ್ಕೇ ರಾಜಕೀಯ ಕೊನೆಯಾಗಲಿ ಅಂತಾ ಮನಸ್ಸು ಮಾಡಿದ್ದಾರೆ. ಕೋಟಿ ಕೋಟಿ ಆಸ್ತಿ ಮಾಡುವ ರಾಜಕಾರಣಿಗಳಿರುವ ಸಮಯದಲ್ಲಿ, ಮಾಡಿರುವ ಚೂರು ಪಾರು ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿ, ತಮ್ಮಷ್ಟಕ್ಕೆ ತಾವು ಜೀವನ ಮಾಡ್ತಿರೋದು ರಮೇಶ್ ಕುಮಾರ್ ಅವರು.
ನಾನು ನನ್ನ ಮಗನಿಗೆ ಹೇಳಿದ್ದೆ, ನೀನೂ ರಾಜಕೀಯಕ್ಕೆ ಬರಬೇಕು ಅಂತಾ ನಾನು ಹೇಳುವುದಿಲ್ಲ. ನಿನಗೇನು ಆಯ್ಕೆ ಬೇಕೋ ನೀನು ಮಾಡಿಕೋ. ನಾನು ನಿನ್ನನ್ನು ತಡಿಯುವುದಿಲ್ಲ. ಆದರೆ ನೀನು ರಾಜಕೀಯಕ್ಕೆ ಬಂದರೆ, ನನ್ನ ಸಕ್ಸಸ್ ನಿನ್ನ ಜೀವನದಲ್ಲಿ ವರ್ಕ್ ಆಗೋದಿಲ್ಲಾ. ಉತ್ತರಾಧಿಕಾರಿ ಅಲ್ಲ ಉತ್ತರ ನೀನೇ ಕಂಡುಕೊಳ್ಳಬೇಕು ಅಂತಾ ಹೇಳಿದ್ದಾರಂತೆ ರಮೇಶ್ ಅವರು.
ಇನ್ನು ರಾಜಕಾರಣಿಗಳ ಬಗ್ಗೆ ಮಾತನಾಡಿರುವ ರಮೇಶ್ ಅವರು, ಹಳೆಯ ರಾಜಕಾರಣಿಗಳು ಇತಿಹಾಸ ಸೃಷ್ಟಿಸಿ ಹೋಗಿದ್ದಾರೆ. ಅವರ ಬಗ್ಗೆ ಜನ ಇಂದಿಗೂ ಉತ್ತಮ ಮಾತುಗಳಲನ್ನೇ ಆಡುತ್ತಾರೆ. ಅದೇ ಕೋಟಿ ಕೋಟಿ ಮಾಡಿ, ಕುಟುಂಬ ರಾಜಕಾರಣ ಮಾಡುವ ರಾಜಕಾರಣಿಗಳು ಎಂದಿಗೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದಿದ್ದಾರೆ ರಮೇಶ್.
ಇನ್ನು ಇಂದಿನ ಕಾಲದ ಚುನಾವಣೆ ಬಗ್ಗೆ ಮಾತನಾಡಿರುವ ರಮೇಶ್ ಅವರು, ಇದೆಲ್ಲಾ ನಿಜಾನಾ ಅಂತಾ ಅನ್ನಿಸುತ್ತದೆ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ದೇವರಾಜು ಅರಸು ರೀತಿ ಹೆಚ್ಚು ವರ್ಷ ಆಡಳಿತ ಮಾಡಿದ್ದಾರೆ. ಅರಸು ಅವರ ದಾಖಲೆ ಮುರಿದಿದ್ದಾರೆ. ಇದೇ ರೀತಿ ಮುಂದುವರೆದು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ರಮೇಶ್ ಹೇಳಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




