Koppala News: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಶ್ರೀ ಗವಿಮಠದಲ್ಲಿ ಇಂದು 17ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.
ಈ ಅಂಗವಾಗಿ ಮಳೆ ಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ಭವ್ಯ ಪಾದಯಾತ್ರೆ ಜರುಗಿತು. ಬೆಳಿಗ್ಗೆ 6 ಗಂಟೆಗೆ ಸಾವಿರಾರು ಭಕ್ತರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆರಂಭವಾದ ಈ ಪಾದಯಾತ್ರೆಯಲ್ಲಿ ಶ್ರೀಗಳ ಸ್ಮರಣೆ ದಾರಿ ಉದ್ದಕ್ಕೂ ಮೊಳಗಿತು.
ಹೂವಿನಿಂದ ಅಲಂಕೃತಗೊಂಡ ಮಂಟಪದಲ್ಲಿ ಶಿವಶಾಂತವೀರ ಶ್ರೀಗಳ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು. ಪಾದಯಾತ್ರೆಯ ನಂತರ ಶ್ರೀಗಳು ಗವಿಸಿದ್ದೇಶ್ವರನ ಕರ್ತೃ ಗದ್ದುಗೆ ಹಾಗೂ ಶಿವಶಾಂತವೀರ ಶ್ರೀಗಳ ಗದ್ದುಗೆಯ ದರ್ಶನ ಪಡೆದರು. ಇನ್ನು ಈ ಪುಣ್ಯಸ್ಮರಣೆಯ ವಿಶೇಷವಾಗಿ ಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.”




