Tumakuru:ಗುಜರಿ ವ್ಯಾಪಾರಿ ಹ*ತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರಿಯಕರನಿಗಾಗಿ ಪತಿಯನ್ನೇ ಚಟ್ಟಕ್ಕೇರಿಸಿದ್ದ ಪತ್ನಿ

Tumakuru: ಮದುವೆಯಾಗಿ 3 ತಿಂಗಳಾಗುವ ಮುನ್ನವೇ ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಬಲಿ ಪಡೆದಿರುವ ಘೋರ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ.

ಗುಜರಿ ವ್ಯಾಪಾರಿ ಮನ್ಸೂರ್ ಪಾಷಾ ಕೊಲೆ ಪ್ರಕರಣಕ್ಕೆ ಈಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಈತನ ಪತ್ನಿ ಫರ್ಜಾನಳೇ ಕೊಲೆಯ ಮಾಸ್ಟರ್ ಮೈಂಡ್ ಅನ್ನೋದು ತನಿಖೆಯಲ್ಲಿ ಬಯಲಾಗಿದೆ ಚಿಕ್ಕಮಗಳೂರಿನ ಧನರಾಜ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಫರ್ಜಾನ, ಮದುವೆಯ ನಂತರವೂ ಆತನ ಜೊತೆ ಸಂಪರ್ಕದಲ್ಲಿದ್ದಳು.

ತಾವು ಒಂದಾಗಲು ಪತಿ ಮನ್ಸೂರ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ, ಗುಜರಿ ಸಾಮಾನು ಕೊಡಿಸುವ ನೆಪದಲ್ಲಿ ಪತಿಯನ್ನು ತೋಟಕ್ಕೆ ಕರೆಸಿ ಬರ್ಬರವಾಗಿ ಕೊಲೆ ಮಾಡಿಸಿದ್ದಾಳೆ.

ಇನ್ನು ಪ್ರಕರಣದ ಬೆನ್ನತ್ತಿದ ತಿಪಟೂರು ಗ್ರಾಮಾಂತರ ಪೊಲೀಸರು, ಟೆಕ್ನಿಕಲ್ ಮಾಹಿತಿ ಆಧರಿಸಿ ಪತ್ನಿ ಫರ್ಜಾನ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.”

About The Author