ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ನಿಮ್ಮ ಸ್ವಂತ ಸಿಎಂರಿಂದಲೇ ಅಸಮಾಧಾನ: ವಿಜಯೇಂದ್ರ ವ್ಯಂಗ್ಯ

Political News: ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ತೆಲಂಗಾಣಾದ ಸಿಎಂ ರೇವಂತ್ ರೆಡ್ಡಿಯವರು ವ್ಯಂಗ್ಯವಾಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವ“ಂದರಲ್ಲಿ ಮಾತನಾಡಿರುವ ರೇವಂತ್ ರೆಡ್ಡಿ ಐಟಿ ಸಿಟಿ ಅಂತಾ ಕರೆಸಿಕ`ಳ್ಳೋ ಬೆಂಗಳೂರಿನ ಸ್ಥಿತಿ ನೋಡಿ. ಅಲ್ಲಿನ ಜನರು ಅರ್ಧ ಜೀವನ ಟ್ರಾಫಿಕ್‌ನಲ್ಲೇ ಕಳೆಯುತ್ತಿದ್ದಾರೆ. ಆದರೆ ನಮ್ಮ ಹೈದರಾಬಾದ್‌ನಲ್ಲಿ ಆ ಪರಿಸ್ಥಿತಿ ಇಲ್ಲ. ನಮಗೆ ಮುಂಬೈ- ಬೆಂಗಳೂರೆಲ್ಲ ಸ್ಪರ್ಧಿಗಳಲ್ಲ. ಸಿಂಗಾಪುರ- ಟೋಕಿಯೋದಂಥ ನಗರಗಳು ನಮ್ಮ ಸ್ಪರ್ಧಿಗಳು. ಆ ರೀತಿ ಮುಂದುವರೆಯಲು ನಾವು ಪ್ರಯತ್ನಿಸಬೇಕು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ಇದೀಗ ಇದನ್ನೇ ದಾಳವಾಗಿಸಿದ ಪ್ರತಿಪಕ್ಷ ಬಿಜೆಪಿಯವರು, ಕಾಂಗ್ರೆಸ್ ಕುರಿತು ವ್ಯಂಗ್ಯವಾಡುತ್ತಿದ್ದಾರೆ. ಈ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಟೀಕೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ. ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ನಮ್ಮ ಹೆಮ್ಮೆಯ ಸಿಲಿಕಾನ್ ಸಿಟಿ, ಕರುನಾಡ ರಾಜಧಾನಿ ಬೆಂಗಳೂರನ್ನು ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಹಾಳು ಮಾಡಿದೆ.

ನಗರದ ಕುರಿತಂತೆ ಇಲ್ಲಿನ ಜನರ ಹಾಗೂ ವಿಪಕ್ಷಗಳ ಟೀಕೆಗಳನ್ನು ತಮ್ಮ ಕೀಳು ರಾಜಕೀಯದ ಕಾಮಾಲೆ ಕಣ್ಣಿನಿಂದಲೇ ನೋಡುತ್ತಾ, ಸದಾ ಧಿಮಾಕಿನಿಂದ ಮಾತನಾಡುವ ಬೆಂಗಳೂರು ಉಸ್ತುವಾರಿಗಳು ಈ ವಿಷಯದಲ್ಲಿ ಮೌನವಾಗಿರುವುದೇಕೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ. 

ನಿಮ್ಮದೇ ಪಕ್ಷದ ನೆರೆ ರಾಜ್ಯದ ಮುಖ್ಯಮಂತ್ರಿಗಳೇ ಬೆಂಗಳೂರಿನ ದುಸ್ಥಿತಿಯನ್ನು ನೋಡಿ ನಗೆಯಾಡುತ್ತಿರುವುದು “ಬ್ರ್ಯಾಂಡ್ ಬೆಂಗಳೂರು” ಎಂಬ ಘೋಷಣೆ ಬರೀ ಬೂಟಾಟಿಕೆ ಎನ್ನುವುದಕ್ಕೆ ಸಾಕ್ಷಿ ನುಡಿದಿದ್ದಾರೆ ಎಂದು ಇಬ್ಬಂದಿತನವೇ ಮಾನ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಕೆಲವು ವರದಿಗಳಂತೆ ಇಂದು ಬೆಂಗಳೂರು ಜಗತ್ತಿನ 2ನೇ ಅತಿ ಹೆಚ್ಚು ದಟ್ಟಣೆಯ ನಗರವಾಗಿ ಹೊರಹೊಮ್ಮಿದೆ. ವಾಹನ ಸವಾರರು ವರ್ಷಕ್ಕೆ ಸರಾಸರಿ 168 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ವ್ಯರ್ಥ ಮಾಡುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಅಭಿವೃದ್ಧಿ ಹೆಸರಲ್ಲಿ, ಲೂಟಿ ಮಾಡುತ್ತಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಸರ್ಕಾರ, ಮೆಟ್ರೋ, ಉಪನಗರ ರೈಲು ಹಾಗೂ ಇನ್ಫ್ರಾಸ್ಟ್ರಕ್ಚರ್ ಯೋಜನೆಗಳ ವಿಳಂಬಕ್ಕೆ ಉತ್ತರಿಸಬೇಕಿದೆ. ನೆರೆಯ ರಾಜ್ಯದ ಸಿಎಂ ನಿಮ್ಮನ್ನು ಹಂಗಿಸುತ್ತಿದ್ದರೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ ನಿಮ್ಮ ಮೌನಕ್ಕೆ ಕಾರಣವೇನು? ಈಗಲಾದರೂ ವ್ಯರ್ಥ ಪ್ರಚಾರದ ಮೋಹ ಬಿಟ್ಟು, ನೈಜ ಆಡಳಿತದ ಕಡೆ ಗಮನಹರಿಸಿ. ವಿಪಕ್ಷಗಳಿರಲಿ, ನಿಮ್ಮದೇ ಪಕ್ಷದ ನಾಯಕರು ನಿಮ್ಮನ್ನು ಟೀಕಿಸುವ ಅವಕಾಶ ಇನ್ನಾದರೂ ಕೊಡದೆ, ಬೆಂಗಳೂರಿನ ಸಮಸ್ಯೆಗಳತ್ತ ಗಮನ ಹರಿಸಿ! ಎಂದು ವಿಜಯೇಂದ್ರ ಹೇಳಿದ್ದಾರೆ.

About The Author